ADVERTISEMENT

ಕೊಪ್ಪಳ | ‘ದಸ್ತಾವೇಜು ಬರಹಗಾರರ ಹೋರಾಟ‘

ಬೇಡಿಕೆ ಈಡೇರಿಕೆಗಾಗಿ ಇಂದು ಬೆಳಗಾವಿ ಚಲೊ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2025, 7:00 IST
Last Updated 16 ಡಿಸೆಂಬರ್ 2025, 7:00 IST
ಕೊಪ್ಪಳದಲ್ಲಿ ಸೋಮವಾರ ಜಿಲ್ಲಾ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ದಸ್ತಾವೇಜು ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಷ್ಕರ ನಡೆಸಿದರು
ಕೊಪ್ಪಳದಲ್ಲಿ ಸೋಮವಾರ ಜಿಲ್ಲಾ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ದಸ್ತಾವೇಜು ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮುಷ್ಕರ ನಡೆಸಿದರು   

ಕೊಪ್ಪಳ: ಪ್ರತ್ಯೇಕ ಲಾಗಿನ್‌ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸೇಕು ಎಂದು ಆಗ್ರಹಿಸಿ ಜಿಲ್ಲಾ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ ದಸ್ತಾವೇಜು ಬರಹಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಸೋಮವಾರ ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಮುಷ್ಕರ ನಡೆಸಿದರು. 

ಬೇರೆ ರಾಜ್ಯಗಳಲ್ಲಿರುವಂತೆ ಕರ್ನಾಟಕದಲ್ಲಿಯೂ ದಸ್ತಾವೇಜು ಬರಹಗಾರರಿಗೆ ಪ್ರತ್ಯೇಕ ಲಾಗಿನ್‌ ನೀಡಬೇಕು, ಕಾವೇರಿ 2.0 ತಂತ್ರಾಂಶದಲ್ಲಿ ಅಗುತ್ತಿರುವ ತೊಂದರೆಗಳನ್ನು ತ್ವರಿತವಾಗಿ ಪರಿಹರಿಸಬೇಕು, ಅನಧಿಕೃತ ವ್ಯಕ್ತಿಗಳನ್ನು ತಡೆಗಟ್ಟಬೇಕು, ರಾಜ್ಯದ ಎಲ್ಲ ದಸ್ತಾವೇಜು ಬರಹಗಾರರಿಗೆ ಏಕಮಾದರಿಯ ಗುರುತಿನ ಚೀಟಿ ನೀಡಬೇಕು ಹಾಗೂ ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.

ಸಂಘದ ಮುಖಂಡ ವೇಣುಗೋಪಾಲಚಾರ್‌ ಜಹಗೀರದಾರ್ ಮಾತನಾಡಿ ‘ಬೇಡಿಕೆ ಈಡೇರಿಕೆಗಾಗಿ ಇದು ಮೊದಲ ಹಂತದಲ್ಲಿ ಸಾಂಕೇತಿಕ ಹೋರಾಟವಾಗಿದ್ದು ಮಂಗಳವಾರ ಅಧಿವೇಶನ ನಡೆಯುತ್ತಿರುವ ಬೆಳಗಾವಿಗೆ ಚಲೊ ನಡೆಸಿ ಮತ್ತೆ ಹೋರಾಟ ಮಾಡುತ್ತೇವೆ. ನಮ್ಮ ಅಧಿಕಾರವನ್ನು ಸರ್ಕಾರ ಮೊಟಕುಗೊಳಿಸುವ ಪ್ರಯತ್ನ ಮಾಡುತ್ತಿದೆ’ ಎಂದರು.

ADVERTISEMENT

ಸಂಘದ ಪದಾಧಿಕಾರಿಗಳಾದ ಸಜ್ಜಾದ ಹುಸೇನ್, ಇಮ್ರಾನ್ ಖಾನ್, ನಾಗಭೂಷಣ ಸಾಲಿಮಠ, ಮಂಜುನಾಥ ಜಡಿ, ಸಾಬೀರಾ ಪಾಷಾ, ಮಹಮ್ಮದ್ ರಜಾಕ್, ಪುಂಡಲೀಕ ಕುಲಕರ್ಣಿ, ಗುರುರಾಜ ಕುಲಕರ್ಣಿ, ಜಿಂದೂಸಾಬ್ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಶಾಸಕ ಶಾಮನೂರು ಶಿವಶಂಕರಪ್ಪ ನಿಧನ; ಶ್ರದ್ದಾಂಜಲಿ ಸಲ್ಲಿಕೆ ಉಪನೋಂದಣಾಧಿಕಾರಿ ಕಚೇರಿ ಆವರಣದಲ್ಲಿ ಮುಷ್ಕರ ಸೇವಾ ಭದ್ರತೆ ಒದಗಿಸಲು ಆಗ್ರಹಿಸಿ ಹೋರಾಟ

ದಸ್ತಾವೇಜು ಬರಹಗಾರರಿಗೆ ಸರ್ಕಾರದಿಂದಲೇ ಮಾನ್ಯತೆ ನೀಡಿ ಪರವಾನಗಿಯನ್ನೂ ಒದಗಿಸಲಾಗಿದೆ. ನಾವು ಎಜೆಂಟರಲ್ಲ. ನಾವು ಅಧಿಕೃತ ವ್ಯಕ್ತಿಗಳಾಗಿದ್ದು ನಮಗೆ ಸೇವಾ ಭದ್ರತೆ ಒದಗಿಸಬೇಕು.

–ವೇಣುಗೋಪಾಲಚಾರ್‌ ಜಹಗೀರದಾರ್ ಸಂಘದ ಪದಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.