ADVERTISEMENT

ಆರೋಗ್ಯ ದಾಸೋಹಕ್ಕೆ ಮಿಡಿದ ಸಮಾನ ಮನಸ್ಕರು

ಗವಿಮಠದ ಆಸ್ಪತ್ರೆಗೆ ಹಳೆ ವಿದ್ಯಾರ್ಥಿಗಳಿಂದ ದೇಣಿಗೆ

​ಪ್ರಜಾವಾಣಿ ವಾರ್ತೆ
Published 29 ಮೇ 2021, 3:06 IST
Last Updated 29 ಮೇ 2021, 3:06 IST
ಕೊಪ್ಪಳದ ಗವಿಸಿದ್ಧೇಶ್ವರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ದಿನಸಿ ಹಾಗೂ ದೇಣಿಗೆ ನೀಡಿದರು
ಕೊಪ್ಪಳದ ಗವಿಸಿದ್ಧೇಶ್ವರ ಪ್ರೌಢಶಾಲೆಯ ಹಳೆ ವಿದ್ಯಾರ್ಥಿಗಳು ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಸಮ್ಮುಖದಲ್ಲಿ ದಿನಸಿ ಹಾಗೂ ದೇಣಿಗೆ ನೀಡಿದರು   

ಕೊಪ್ಪಳ: ಕೊರೊನಾ 2ನೇ ಅಲೆಯ ಸಂಕಷ್ಟ ಕಾಲದಲ್ಲಿ 100 ಆಮ್ಲಜನಕಯುಕ್ತ ಆಸ್ಪತ್ರೆ ಮತ್ತು 200 ಹಾಸಿಗೆ ಸಾಮರ್ಥ್ಯದ ಕೋವಿಡ್‌ ಆರೈಕೆ ಕೇಂದ್ರವನ್ನು ಸರ್ಕಾರದ ಸಹಯೋಗದೊಂದಿಗೆ ಆರಂಭಿಸಿದ ಗವಿಮಠದ ‘ಆರೋಗ್ಯ ದಾಸೋಹಕ್ಕೆ’ ಗವಿಮಠದ ಹಳೆ ವಿದ್ಯಾರ್ಥಿಗಳು ದೇಣಿಗೆ ನೀಡುವ ಮೂಲಕ ಮಾದರಿ ಕಾರ್ಯ ಮಾಡಿದ್ದಾರೆ.

ಗವಿಮಠದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ1982ರ ವರ್ಗದ ಸಮಾನ ಮನಸ್ಕ ಸ್ನೇಹಿತರು, ಹಳೆ ವಿದ್ಯಾರ್ಥಿ ಬಳಗ ಮಠದ ಆಸ್ಪತ್ರೆಗೆ ₹60 ಸಾವಿರ ದೇಣಿಗೆ ಜತೆಗೆ ದಿನಸಿ ವಸ್ತುಗಳನ್ನು ದೇಣಿಗೆ ನೀಡಿದ್ದಾರೆ.

ಗವಿಮಠ ಅನ್ನ, ಅಕ್ಷರ, ಅರಿವು, ಆರೋಗ್ಯದ ಮೂಲಕ ತ್ರಿವಿಧ ದಾಸೋಹದ ಜತೆಗೆ ಅನೇಕ ಸಾಮಾಜಿಕ, ಧಾರ್ಮಿಕ ಕಾರ್ಯಗಳನ್ನು ಮಾಡುತ್ತಿದೆ. ಕೊರೊನಾ ಸಂಕಷ್ಟದ ಕಾಲದಲ್ಲಿ ಸೋಂಕಿತರ ಕಣ್ಣೀರು ಒರೆಸುವ ಮೂಲಕ ಮಾನವೀಯತೆ ಮೆರೆದಿರುವ ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿ ಅವರ ಸೇವೆ ಶ್ಲಾಘನೀಯ ಎಂದು ಹಳೆ ವಿದ್ಯಾರ್ಥಿಗಳಾದ ಅಂದಪ್ಪ ಬೆಣಕಲ್, ನ್ಯಾಯಾಧೀಶವೆಂಕಟೇಶ ಹುಲಿಗಿ ಹಾಗೂ ಅಮೆರಿಕಾದ ಇಟಗಿ ಹೇಳಿದರು.

ADVERTISEMENT

ಹಳೆ ವಿದ್ಯಾರ್ಥಿಗಳಾದ ವಿಜಯ ಪಾಲ್ತುರು, ಚಂದ್ರಶೇಖರ್,ವೀರಬಸಪ್ಪ ನಲ್ವಾಡ್, ಮನೋಜ್ ಚೋಪ್ರಾ, ಬಸವರಾಜ್ ಕೊಪ್ಪಳ, ಸತ್ಯನಾರಾಯಣ ಕುಲ್ಕರ್ಣಿ, ಕೊಟ್ರಪ್ಪ ಬೊಮ್ಮನಾಲ, ಮಲ್ಲಿಕಾರ್ಜುನ ದಾಣಿ, ಶಶಿ ಪುರಂದರ, ನಾಗರಾಜ್ ದೇಸಾಯಿ, ರುದ್ರಪ್ಪ ಚಾವಡಿ, ಶಿವು ಸಂಕಲಪೂರ್, ಮಟ್ಟಿ ಬಸೆಟ್ಟಿ, ವೀರಣ್ಣ ಶಿವಷೆಟ್ಟಿ, ಪೂಜಾರ್, ಬಾಬರ್ ಸವದತ್ತಿ, ಶ್ರೀನಿವಾಸ್ ಜನಾದ್ರಿ, ಸೋಮನಾಥ ಮೇಣೆದಾಳ, ಶಿವಯೋಗಿ ಬಳ್ಳೊಳ್ಳಿ ಹಾಗೂ ಕೊಟ್ರಪ್ಪ ಹಮ್ಮಿಗಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.