ADVERTISEMENT

ಹನುಮಸಾಗರ: ಪರಸ್ಪರ ಶುಭಾಶಯ ವಿನಿಮಯ

ಈದ್‌ ಉಲ್‌ ಫಿತ್ರ್‌ ಆಚರಣೆ: ವಿವಿಧ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ

​ಪ್ರಜಾವಾಣಿ ವಾರ್ತೆ
Published 3 ಮೇ 2022, 13:50 IST
Last Updated 3 ಮೇ 2022, 13:50 IST
ಹನುಮಸಾಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು
ಹನುಮಸಾಗರದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮಾಜದವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು   

ಹನುಮಸಾಗರ: ಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಮುಸ್ಲಿಂ ಸಮಾಜದವರು ಮಂಗಳವಾರ ಈದ್ ಉಲ್ ಫಿತ್ರ್ ಆಚರಿಸಿದರು.

ಹೂಲಗೇರಾ, ಹನುಮನಾಳ, ಮಾಲಗಿತ್ತಿ, ನಿಲೋಗಲ್, ಕುಂಬಳಾವತಿ, ಚಳಗೇರಾ, ಕಲಾಲಬಂಡಿ, ಮೂಗನೂರ ಸೇರಿ ವಿವಿಧ ಗ್ರಾಮಗಳ ಈದ್ಗಾ ಮೈದಾನಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು.

ಹನುಮಸಾಗರದ ಬೀಳಗಿ ಅಗಸಿ ಬಾಗಿಲ ಬಳಿ ಇರುವ ಈದ್ಗಾ ಮೈದಾನದಲ್ಲಿ ಅಂಜುಮನ್ ಇಸ್ಲಾಂ ಸಮಿತಿಯ ಮುಸ್ಲಿಂ ಬಾಂಧವರು, ಮನ್ನೇರಾಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ತಂಜೀಮ್ ಇಸ್ಲಾಂ ಸಮಿತಿಯ ಮುಸ್ಲಿಂ ಬಾಂಧವರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು.

ADVERTISEMENT

ಬೀಳಗಿ ಅಗಸಿ ಬಾಗಿಲ ಬಳಿ ಇರುವ ಈದ್ಗಾ ಮೈದಾನದಲ್ಲಿ ಮೈನುದ್ದೀನ್‍ಸಾಬ ಖಾಜಿ ಪ್ರಾರ್ಥನೆ ಮಾಡಿಸಿದರು. ನಜೀರಸಾಬ ಮುಲ್ಲಾ ಆಜಾ ನೀಡಿದರು.

ಪ್ರಮುಖರಾದ ಸಯ್ಯದ್‌ಷಾ ಮುರ್ತುಜಾ ಖಾದ್ರಿ ಪೈಸಲ್ ಪಾಷಾ, ಮುನೀರ್ ಅಹ್ಮದ್ ಖಾದ್ರಿ, ಮೈನುದ್ದೀನ್ ಸಾಬ್ ಖಾಜಿ, ಗೌಸಮೋಹಿಯುದ್ದೀನ್‌ ಸಾಬ್ ವಂಟೆಳಿ, ಅಬ್ದುಲ್‍ಕರೀಂ ವಂಟೆಳಿ, ಅಬ್ದುಲ್‍ ರಜಾಕ್ ಟೇಲರ್, ಖಾದರಸಾಬ್‌ ತಹಶೀಲ್ದಾರ್, ನೂರಾನಿ ಮನಿಯಾರ ಮೇಸ್ತ್ರಿ, ಹಾಜಿ ಶೇಖಸಾಬ ಹೊಸಪೇಟೆ, ಚಂದೂಸಾಬ ಬಳೂಟಗಿ, ದಾವಲಸಾಬ ಮೋಮಿನ, ದಾದೇಸಾಬ ತಹಶೀಲ್ದಾರ್, ಮುರ್ತುಜಾಸಾಬ ಕಟಗಿ, ಮಹಿಮೂದ್ ಖಾಜಿ, ಮಹಿಬೂಬ ನದಾಫ್, ಗ್ರಾಮ ಪಂಚಾಯಿತಿ ಸದಸ್ಯ ರಿಯಾಜ್ ಖಾಜಿ, ಪೀರಸಾಬ ಮೇಸ್ತ್ರಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ಮನ್ನೇರಾಳ ರಸ್ತೆಯಲ್ಲಿರುವ ಈದ್ಗಾ ಮೈದಾನದಲ್ಲಿ ತಂಜೀಮ್ ಇಸ್ಲಾಂ ಸಮಿತಿ ವತಿಯಿಂದ ಸಾಮೂಹಿಕ ಪ್ರಾರ್ಥನೆ ಸಲ್ಲಿಸಲಾಯಿತು.

ದಾದೇಸಾಬ ಢಾಲಾಯತ, ಡಾ.ನಜೀರಸಾಬ ಮೇಣೆಧಾಳ, ಜಮಾಅತೆ ಇಸ್ಲಾಮೀ ಹಿಂದ್‍ನ ಗೇಸೂದರಾಜ ಮೂಲಿಮನಿ, ಅಬ್ದುಲ್‍ರಜಾಕ್ ಚಳಗೇರಿ, ಮುರ್ತುಜಾಸಾಬ ಹುನಗುಂದ, ಅಬ್ದುಲ್‍ರಹೀಮಸಾಬ ಮೂಲಿಮನಿ, ಖಾದಿರಸಾಬ ಪತ್ಲಾ, ರೈತ ಸಂಘದ ಜಿಲ್ಲಾ ಅಧ್ಯಕ್ಷ ನಜೀರಸಾಬ ಮೂಲಿಮನಿ, ಆಸೀಫ್ ಡಾಲಾಯತ್, ಖಾಜಾಹುಸೇನ್ ವಂಟೆಳಿ, ದಾದೇಸಾಬ ಮೂಲಿಮನಿ, ಮಹಿಬೂಬಸಾಬ ಮೂಲಿಮನಿ, ರಾಜೇಸಾಬ ಕುಷ್ಟಗಿ, ಖಾಜೇಸಾಬ ಡಾಲಾಯತ, ಗೃಹರಕ್ಷಕ ದಳದ ಮುಖ್ಯಸ್ಥ ಅಕ್ಬರ್ ಚಳಗೇರಿ, ಎಎಸ್‍ಐ ಕಾಸೀಂಸಾಬ ಮೂಲಿಮನಿ, ಭಾಷುಸಾಬ ದೋಟಿಹಾಳ, ಮಹಿಬೂಬಸಾಬ ಮೇಣೆದಾಳ, ಸಾಹೇಬಜಾನಸಾಬ ಹೊಸಳ್ಳಿ, ಮೌಲಾಸಾಬ ಬಾಗವಾನ, ಅಹ್ಮದ್ ಚೌದರಿ, ರಾಜಮಹಮ್ಮದ್‍ಸಾಬ ಮೂಲಿಮನಿ, ಶಬ್ಬೀರ ಹುನಗುಂದ, ದಾವಲಸಾಬ ಹೊಸಮನಿ, ರಾಜೇಸಾಬ ಆಲೂರ, ಹುಸೇನಸಾಬ ಕಟಗಿ, ಖಾಜೇಸಾಬ ಮುದಗಲ್ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.