ADVERTISEMENT

ಭೋಜನ ಸವಿದ ರೈತರು

​ಪ್ರಜಾವಾಣಿ ವಾರ್ತೆ
Published 3 ಜನವರಿ 2022, 2:55 IST
Last Updated 3 ಜನವರಿ 2022, 2:55 IST
ಅಳವಂಡಿ ವ್ಯಾಪ್ತಿಯಲ್ಲಿ ಹೊಲಗಳಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಚರಗ ಚೆಲ್ಲಲಾಯಿತು
ಅಳವಂಡಿ ವ್ಯಾಪ್ತಿಯಲ್ಲಿ ಹೊಲಗಳಲ್ಲಿ ಎಳ್ಳ ಅಮಾವಾಸ್ಯೆ ಪ್ರಯುಕ್ತ ಚರಗ ಚೆಲ್ಲಲಾಯಿತು   

ಅಳವಂಡಿ: ಎಳ್ಳ ಅಮಾವಾಸ್ಯೆ ಪ್ರಯುಕ್ತ ರೈತರು ಭೂಮಿಗೆ ಪೂಜೆ ಸಲ್ಲಿಸಿ, ಚರಗ ಚೆಲ್ಲಿದರು. ಸಾಮೂಹಿಕ ಭೋಜನ ಸವಿದರು.

ಈ ಹಬ್ಬಕ್ಕಾಗಿ ರೈತರು 15 ದಿನಗಳಿಂದ ತಯಾರಿ ಮಾಡುಕೊಂಡಿದ್ದರು. ವಿವಿಧ ತರಹದ ಖಾದ್ಯಗಳನ್ನು ತಯಾರಿಸಿದ್ದರು. ನಂತರ ಬಂಧು ಬಳಗದೊಂದಿಗೆ ಚಕ್ಕಡಿ, ಟ್ರ್ಯಾಕ್ಟರ್, ಆಟೊ ಮುಂತಾದ ವಾಹನಗಳಲ್ಲಿ ಹೊಲಕ್ಕೆ ತೆರಳಿ ಭೂಮಿ ತಾಯಿಗೆ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಬಂಧು ಬಳಗದೊಂದಿಗೆ ಊಟ ಸವಿದು ಸಂಭ್ರಮಿಸಿದರು.

ರೈತ ರವೀಂದ್ರ ಸಂಗರಡ್ಡಿ ಮಾತನಾಡಿ,‘ಈ ವರ್ಷ ಹಿಂಗಾರು ಹಂಗಾಮಿನಲ್ಲಿ ಬಿತ್ತಿದ ಕಡಲೆ, ಜೋಳ ಸೇರಿ ಹಲವು ಬೆಳೆಗಳು ಸಮೃದ್ಧವಾಗಿ ಬೆಳೆದಿದ್ದು, ಉತ್ತಮ ಫಸಲಿನ ನೀರಿಕ್ಷೆಯಲ್ಲಿದ್ದೇವೆ. ಎಳ್ಳ ಅಮಾವಾಸ್ಯೆ ಪ್ರಯುಕ್ತ ಬಂಧು ಬಳಗ, ಮಿತ್ರರೊಂದಿಗೆ ಜಮೀನುಗಳಿಗೆ ತೆರಳಿ ಪೂಜೆ ಸಲ್ಲಿಸಿ ಚರಗ ಚೆಲ್ಲಿ ಊಟ ಮಾಡುತ್ತೇವೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.