ಕನಕಗಿರಿ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಹಸಿರು ಸೇನೆ ಹಾಗೂ ರೈತ ಸಂಘಟನೆಯ ಪದಾಧಿಕಾರಿಗಳು ಸಾವಿತ್ರಿ ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ತಾಲ್ಲೂಕು ಅಧ್ಯಕ್ಷ ಗಣೇಶ ರೆಡ್ಡಿ ಮಾತನಾಡಿ ಎಪಿಎಂಸಿಯ ನೀಲ ನಕಾಶೆ ಪ್ರಕಾರವಾಗಿ ಎಪಿಎಂಸಿ ಸುತ್ತಲೂ ನಿರ್ಮಿಸಬೇಕು. ಹಳೆಯ ಎಪಿಎಂಸಿ ಹೊರಗೋಡೆಯನ್ನು ತೆರವುಗೊಳಿಸಿದವರ ವಿರುದ್ಧ ಕಾನೂನು ಪ್ರಕಾರ ಶಿಸ್ತು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಬ್ಲೂ ಪ್ರಿಂಟ್ ನಿಯಮ ಉಲ್ಲಂಘನೆ ಮಾಡಿರುವವರ ವಿರುದ್ದ ಸೂಕ್ತ ಕ್ರಮ ಜರುಗಿಸುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ, ಎಂದು ದೂರಿದರು.
ಎಪಿಎಂಸಿಯ ಪರವಾನಿಗಿ ಪಡೆದು ಕೃಷಿಯೇತರ ಚಟುವಟಿಕೆಗಳಿಗೆ ಮಳಿಗೆಗಳನ್ನು ಬಾಡಿಗೆ ನೀಡಿರುವವರ ವಿರುದ್ಧ ಏಕೆ ಕ್ರಮ ಜರುಗಿಸಿಲ್ಲ ಎಂದು ಪ್ರಶ್ನಿಸಿದರು.
ಎಪಿಎಂಸಿಯಲ್ಲಿ ರೈತರಿಗೆ ವ್ಯವಹಾರಿಕವಾಗಿ ಮೋಸವಾಗುತ್ತಿದೆ ಇದನ್ನು ಅಧಿಕಾರಿಗಳು ತಡೆಗಟ್ಟಬೇಕೆಂದು ಆಗ್ರಹಿಸಿದರು. ಪ್ರಮುಖರಾದ ಕೃಷ್ಣಪ್ಪ ಚಲವಾದಿ, ಸಗರಪ್ಪ ಕಂಪ್ಲಿ, ಸಣ್ಣ ಹನುಮನಗೌಡ ಬಸರಿಹಾಳ, ಮರಿಯಪ್ಪ ಹುಗ್ಗಿ, ದುರ್ಗಪ್ಪ ತಿಪ್ಪನಾಳ, ತಿಪ್ಪಾರೆಡ್ಡಿ ಹುಲಿಹೈದರ, ಮರಿಯಪ್ಪ, ಪಾಮಣ್ಣ ಪೂಜಾರ, ಕೃಷ್ಣ ಕಾಕಿ. ವೀರೇಶ ಬಾವಿಕಟ್ಟಿ, ನಾಗೇಶ ಪೂಜಾರ, ಕನಕಪ್ಪ ಸಿರಿವಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.