ADVERTISEMENT

ಕೊಪ್ಪಳ: ರಾಜೀವಗಾಂಧಿ ಕಾಲೇಜಿಗೆ ಐದು ರ್‍ಯಾಂಕ್‌

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2024, 13:37 IST
Last Updated 8 ಫೆಬ್ರುವರಿ 2024, 13:37 IST
ಮೇಘಾ ಮಾಘ
ಮೇಘಾ ಮಾಘ   

ಕೊಪ್ಪಳ: ಬಳ್ಳಾರಿಯ ವಿಜಯನಗರ ಕೃಷ್ಣದೇವರಾಯ ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಬಿ.ಇಡಿ ವಿಭಾಗದ ರ್‍ಯಾಂಕ್‌ ಪಟ್ಟಿ ಬಿಡುಗಡೆ ಮಾಡಿದ್ದು, ಇಲ್ಲಿಂದ ನಗರದ ಹೊರವಲಯದಲ್ಲಿರುವ ದದೇಗಲ್ ಗ್ರಾಮದ ರಾಜೀವಗಾಂಧಿ ಗ್ರಾಮೀಣ ಶಿಕ್ಷಣ ಮಹಾವಿದ್ಯಾಲಯವು ಐದು ರ‍್ಯಾಂಕ್‌ಗಳನ್ನು ಬಾಚಿಕೊಂಡಿದೆ.

ಮೇಘಾ ಮಾಘ (ಪ್ರಥಮ), ಮಾರುತಿ ಸಂಗಟಿ (ನಾಲ್ಕು), ಅನಿತಾ ತಿಮ್ಮರೆಡ್ಡಿ (ಏಳು), ಮೈಲಾರಪ್ಪ ಗುರಿಕಾರ (ಎಂಟು) ಮತ್ತು ಸ್ನೇಹಾ ಶೀಲವಂತರ (ಒಂಬತ್ತು) ರ್‍ಯಾಂಕ್‌ಗಳನ್ನು ಗಳಿಸಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಅಧ್ಯಕ್ಷ ಕರಿಯಣ್ಣ ಸಂಗಟಿ, ಉಪಾಧ್ಯಕ್ಷೆ ರುದ್ರಮ್ಮ ಸಂಗಟಿ ಆಡಳಿತಾಧಿಕಾರಿ ಮಹಾಂತೇಶ ಸಂಗಟಿ, ಪ್ರಾಚಾರ್ಯ ವಿನೋದ ಹೂಲಿ ಹರ್ಷ ವ್ಯಕ್ತಪಡಿಸಿದ್ದಾರೆ.

ಮಾರುತಿ ಸಂಗಟಿ
ಅನಿತಾ ತಿಮ್ಮರೆಡ್ಡಿ
ಮೈಲಾರಪ್ಪ ಗುರಿಕಾರ
ಸ್ನೇಹಾ ಶೀಲವಂತರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT