ADVERTISEMENT

ಕನಕಗಿರಿ: ಆಹಾರ ಧಾನ್ಯದ ಕಿಟ್‌ ವಿತರಣೆ

​ಪ್ರಜಾವಾಣಿ ವಾರ್ತೆ
Published 13 ಜೂನ್ 2021, 11:09 IST
Last Updated 13 ಜೂನ್ 2021, 11:09 IST
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕನಕಗಿರಿ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ ಅವರು ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು
ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಕನಕಗಿರಿ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ ಅವರು ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸಿದರು   

ಕನಕಗಿರಿ: ‘ಲಾಕ್‌ಡೌನ್‌ ಸಮಯದಲ್ಲಿ ಅಜೀಂ ಪ್ರೇಮ್ ಜೀ ಫೌಂಡೇಶನ್ ಅವರು ಬಡ ಕಲಾವಿದರನ್ನು ಗುರುತಿಸಿ ಆಹಾರದ ಕಿಟ್ ನೀಡಿರುವುದು ಶ್ಲಾಘನೀಯ’ ಎಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷೆ ಶಂಶಾದಬೇಗ್ಂ ಮೆಹಬೂಬಹುಸೇನ ತಿಳಿಸಿದರು.

ತಾಲ್ಲೂಕಿನ ಬಡ ಕಲಾವಿದರಿಗೆ ಭಾನುವಾರ ಆಹಾರ ಧಾನ್ಯದ ಕಿಟ್‌ ವಿತರಿಸಿ ಅವರು ಮಾತನಾಡಿದರು.

ಅಜೀಂ ಪ್ರೇಮ್ ಜೀ ಸಂಸ್ಥೆಯವರು ಕಳೆದ 20 ವರ್ಷಗಳಿಂದಲೂ ಪ್ರಾಥಮಿಕ ಶಾಲಾ ಶಿಕ್ಷಕರಿಗೆ ವೃತ್ತಿ ತರಬೇತಿ ನೀಡುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ ಹೆಚ್ಚಳ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ADVERTISEMENT

ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಕನಕರೆಡ್ಡಿ ಕೆರಿ, ಯುವ ಮುಂದಾಳು ರವಿ ಪಾತ್ರದ ಮಾತನಾಡಿ,‘ಕಲಾವಿದರು ತಮ್ಮ ಕಲೆಯನ್ನು ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಲಾಕ್‌ಡೌನ್‌ ಘೋಷಣೆ ಜಾರಿಯಲ್ಲಿರುವುದರಿಂದ ಕಲಾವಿದರಿಗೆ ಕೆಲಸ ಇಲ್ಲದಂತಾಗಿದೆ. ಇಂಥ ಸಮಯದಲ್ಲಿ ಬಡ ಕಲಾವಿದರಿಗೆ ಸಹಾಯ ಮಾಡಿರುವುದು ಸಂತಸ ತಂದಿದೆ’ ಎಂದರು.

ಕಲಾವಿದರಾದ ದುರಗಪ್ಪ ವಣಿಕೇರಿ , ವೆಂಕೋಬ ಸಂಕನಾಳ, ಶ್ರೀದೇವಿ ತಳವಾರ ಹಾಗೂ ಗೋಪಾಲ ನಾಯಕ ಸೇರಿ ಇತರ ಕಲಾವಿದರಿಗೆ ಆಹಾರ ಧಾನ್ಯದ ಕಿಟ್ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.