ADVERTISEMENT

ಗಂಗಾವತಿ: ಉತ್ಸವ ಮೈದಾನ ವಶಕ್ಕೆ ಪಡೆಯಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2024, 15:40 IST
Last Updated 29 ಮಾರ್ಚ್ 2024, 15:40 IST
ಪದ್ಮನಾಭರಾಜು
ಪದ್ಮನಾಭರಾಜು   

ಗಂಗಾವತಿ: ತಾಲ್ಲೂಕಿನ ಆನೆಗೊಂದಿ ಉತ್ಸವ ಮೈದಾನದ ಮಾಲೀಕರು ತಂತಿ ಬೇಲಿ, ಕಂಬ ನಿರ್ಮಿಸುವ ಮೂಲಕ ಸ್ವತ್ತು ಭದ್ರಪಡಿಸಿಕೊಳ್ಳುತ್ತಿದ್ದು, ಆನೆಗೊಂದಿ ಉತ್ಸವ, ಹನುಮಮಾಲಾ ವಿಸರ್ಜನೆ ಹಿತದೃಷ್ಟಿಯಿಂದ ಜಿಲ್ಲಾಡಳಿತ ಕಾನೂನಾತ್ಮಕವಾಗಿ ಉತ್ಸವ ಮೈದಾನ ಪಡೆಯಬೇಕಿದೆ’ ಎಂದು ತಾಲ್ಲೂಕು ಭೂನ್ಯಾಯ ಮಂಡಳಿ ಮಾಜಿ ಸದಸ್ಯ ಪದ್ಮನಾಭರಾಜು ಒತ್ತಾಯಿಸಿದರು.

ವಿಜಯನಗರ ಸಾಮ್ರಾಜ್ಯದ ಗತವೈಭವ ಸಾರಲು ಆನೆಗೊಂದಿ ಉತ್ಸವ ಮೈದಾನದ ಸಹಕಾರಿಯಾಗಿದ್ದು, 1999ರಿಂದ ಈವರೆಗೆ ಇಲ್ಲಿಯೇ ಉತ್ಸವ ನಡೆಸಲಾಗಿದೆ. ಈ ಹಿಂದಿನ ಜಿಲ್ಲಾಧಿಕಾರಿಗಳಾದ ನವೀನ್ ರಾಜಸಿಂಗ್, ಸತ್ಯಮೂರ್ತಿ, ತುಳಸಿ ಮದ್ದಿನೇನಿ, ಸುನಿಲಕುಮಾರ ಎಲ್ಲರೂ ಅಚ್ಚುಕಟ್ಟು ವ್ಯವಸ್ಥೆ ಮಾಡಿದ್ದಾರೆ.

ಇನ್ನೂ ಹನುಮಜಯಂತಿ, ಹನುಮಮಾಲಾ ವಿಸರ್ಜನೆ ವೇಳೆ ಬಸ್, ಕಾರು ಸೇರಿ ದ್ವಿಚಕ್ರ ವಾಹನಗಳಿಗೆ ಈ ಮೈದಾನವನ್ನೇ ಪಾರ್ಕಿಂಗ್ ವ್ಯವಸ್ಥೆಗಾಗಿ ಬಳಸಲಾಗುತ್ತದೆ. ಜೊತೆಗೆ ಅಂಜನಾದ್ರಿ ಬೆಟ್ಟಕ್ಕೆ ರಾಜ್ಯದ ಮುಖ್ಯಮಂತ್ರಿ, ಪ್ರಧಾನಿ, ರಾಜ್ಯಪಾಲ ಸೇರಿ ಯಾರೇ ಬರಲಿ ಅವರ ಹೆಲಿಕಾಪ್ಟರ್ ನಿಲ್ಲಲು ಈ ಮೈದಾನದಲ್ಲೆ ಹೆಲಿಪ್ಯಾಡ್ ರಚಿಸಲಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಕಾನೂನು ಪ್ರಕಾರ ಜಮೀನು ಮಾಲೀಕನಿಂದ ಸ್ವತ್ತು ಪಡೆದು, ಪರಿಹಾರವಾಗಿ ಜಮೀನು ಇಲ್ಲವೇ ಪರಿಹಾರ ಧನ ಸಂದಾಯ ಮಾಡಿ, ಈ ಉತ್ಸವ ಮೈದಾನವನ್ನು ಆನೆಗೊಂದಿ ಗ್ರಾಮ ಪಂಚಾಯಿತಿಗೆ ಸುಪರ್ದಿಗೆ ಒದಗಿಸಿ ಕೊಡಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.