ADVERTISEMENT

ಅರಣ್ಯ ಇಲಾಖೆಯ ನಿವೃತ್ತ ನೌಕರರ ಸಭೆ: ಸೌಲಭ್ಯಕ್ಕೆ ಒತ್ತಾಯಿಸಿ ನಿರ್ಣಯ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2021, 5:23 IST
Last Updated 6 ಅಕ್ಟೋಬರ್ 2021, 5:23 IST
ಮುನಿರಾಬಾದ್‌ನ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಈಚೆಗೆ ಅರಣ್ಯ ಇಲಾಖೆಯ ನಿವೃತ್ತ ನೌಕರರು ಸಭೆ ಸೇರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು
ಮುನಿರಾಬಾದ್‌ನ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಈಚೆಗೆ ಅರಣ್ಯ ಇಲಾಖೆಯ ನಿವೃತ್ತ ನೌಕರರು ಸಭೆ ಸೇರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಪದಾಧಿಕಾರಿಗಳನ್ನು ಆಯ್ಕೆ ಮಾಡಿದರು   

ಮುನಿರಾಬಾದ್: ಇಲ್ಲಿನ ಅರಣ್ಯ ಇಲಾಖೆಯ ಪ್ರವಾಸಿ ಮಂದಿರದಲ್ಲಿ ಈಚೆಗೆ ಸಭೆ ಸೇರಿದ ಕಲ್ಯಾಣ ಕರ್ನಾಟಕ ಭಾಗದ ನಿವೃತ್ತ ಅರಣ್ಯ ಇಲಾಖೆಯ ನೌಕರರು, ನಿವೃತ್ತಿ ಹೊಂದಿದ ನೌಕರರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ನಿರ್ಣಯ ಅಂಗೀಕರಿಸಿದರು.

ಸಂಘಟನೆಯ ಕಲ್ಯಾಣ ಕರ್ನಾಟಕ ವಿಭಾಗದ ಅಧ್ಯಕ್ಷ ಕಲಬುರ್ಗಿಯ ಆರ್.ಆರ್.ಯಾದವ್ ಮಾತನಾಡಿ,‘ನಮಗೆ ಸಿಗಬೇಕಾದ ಸೌಲಭ್ಯಗಳಿಗಾಗಿ ಸಂಘಟಿತ ಹೋರಾಟ ಮಾಡುವುದು ಅನಿವಾರ್ಯವಾಗಿದೆ. ನಿವೃತ್ತ ನೌಕರರಿಗೆ ಗುರುತಿನ ಚೀಟಿ, ಆರೋಗ್ಯ ಭಾಗ್ಯ ಯೋಜನೆಯಡಿ ಉಚಿತ ವೈದ್ಯಕೀಯ ನೆರವು, ನೌಕರನ ಮಕ್ಕಳು ಮತ್ತು ಮೊಮ್ಮಕ್ಕಳ ಶೈಕ್ಷಣಿಕ ಅಭಿವೃದ್ಧಿಗೆ ನೆರವು ನೀಡಬೇಕು’ ಎಂದರು.

75 ವರ್ಷ ಮೇಲ್ಪಟ್ಟ ಹಿರಿಯರಿಗೆ ಸಾಮಾನ್ಯ ಸಭೆಯಲ್ಲಿ ಸನ್ಮಾನ, ನಿವೃತ್ತ ನೌಕರ ನಿಧನರಾದ ಸಂದರ್ಭದಲ್ಲಿ ಗೌರವಧನ ನೀಡುವ ಜೊತೆಗೆ ಇಲಾಖೆಯ ಒಬ್ಬ ಪ್ರತಿನಿಧಿ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಬೇಕು. ಪ್ರಾಣಿ ಸಂಗ್ರಹಾಲಯದಲ್ಲಿ ಸಫಾರಿ, ಇಲಾಖೆಯ ಪ್ರವಾಸಿ ಮಂದಿರದಲ್ಲಿ ಉಳಿದುಕೊಳ್ಳಲು ರಿಯಾಯಿತಿ ದರ ನಿಗದಿಗೊಳಿಸಬೇಕು ಎಂದು ನಿರ್ಣಯ ಮಂಡಿಸಿದರು. ನಿವೃತ್ತ ಅರಣ್ಯಾಧಿಕಾರಿ ವೆಂಕಟೇಶಲು ಮಾತನಾಡಿದರು.

ADVERTISEMENT

ಸಭೆಗೂ ಮುನ್ನ ಈಚೆಗೆ ನಿಧನರಾದ ನಿವೃತ್ತ ನೌಕರರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕೊಪ್ಪಳ ಜಿಲ್ಲೆಯ ಎನ್.ಕೆ.ಬಸಪ್ಪ(ಉಪಾಧ್ಯಕ್ಷ), ಆದನಗೌಡ (ಕಾರ್ಯದರ್ಶಿ), ದೊಡ್ಡಪ್ಪ (ಸಹಕಾರ್ಯದರ್ಶಿ) ಆಯ್ಕೆಯಾದರು. ಬಳ್ಳಾರಿ ಜಿಲ್ಲೆಯ ಬಿ. ವೆಂಕಟೇಶಲು (ಉಪಾಧ್ಯಕ್ಷ), ಎಂ ನಾಗರಾಜ (ಕಾರ್ಯದರ್ಶಿ), ಜೆ. ಬಸವರಾಜ (ಸಹಕಾರ್ಯದರ್ಶಿ) ಅವಿರೋಧ ಆಯ್ಕೆಯಾದರು. ಪ್ರಧಾನ ಕಾರ್ಯದರ್ಶಿ ಸಿದ್ದರಾಮಪ್ಪ ನವಲಸಪುರ, ಚನ್ನಬಸಪ್ಪ, ಬೂದಣ್ಣ, ಏನ್.ಕೆ. ಬಸಪ್ಪ, ಸೈಯದ್ ಅಜಮತ್ ಉಲ್ಲಾ ಹುಸೇನಿ, ಬಿ.ಜಹಾಂಗೀರ್, ಸಿ.ಎಂ.ಅರಕೇರಿ, ಎಂ.ಎಂ. ಚಿಕ್ಕಮಠ್, ನಾಗರಾಜ, ದೊಡ್ಡಪ್ಪ, ಬಸವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.