ಗಂಗಾವತಿ: ತಾಲ್ಲೂಕಿನ ಆನೆಗುಂದಿ ರಸ್ತೆಯಲ್ಲಿನ ಗಣೇಶ ದೇವಸ್ಥಾನದಲ್ಲಿ ಭಾನುವಾರ ಆರ್ಯ ಈಡಿಗ ಸಮಾಜದ ವತಿಯಿಂದ ಗಣೇಶ ಪ್ರತಿಷ್ಠಾಪನೆಯ ಹಿನ್ನೆಲೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ಈಡಿಗ ಸಮಾಜದ ಮುಖಂಡ ಅಜಯ ಬಿಚ್ಚಾಲಿ ಮಾತನಾಡಿ, ಈಡಿಗ ಸಮಾಜದ ವತಿಯಿಂದ ಪ್ರತಿ ವರ್ಷ ಗಂಗಾವತಿ ನಗರದಲ್ಲಿ ಗಣೇಶನ ಮೂರ್ತಿ ಪ್ರತಿಷ್ಠಾಪನೆ ಮಾಡಿ, ಸಂಭ್ರಮ ಆಚರಿಸಲಾಗುತ್ತಿತ್ತು. ಆದರೆ, ಕೆಲ ವರ್ಷಗಳಿಂದ ಮೂರ್ತಿ ಪ್ರತಿಷ್ಠಾಪಿಸಲು ಆಗಲಿಲ್ಲ. ಈ ವರ್ಷ ಈಡಿಗ ಸಮಾಜದ ಯುವಕರೆಲ್ಲರೂ ಒಗ್ಗಟ್ಟಾಗಿ ಎಂದಿನಂತೆ ಗಣೇಶ ಚತುರ್ಥಿ ಆಚರಿಸಲು ಮುಂದಾಗಬೇಕು. ಜೊತೆಗೆ ಜಾತ್ಯತೀತವಾಗಿ ಸಾಮಾಜಿಕ ಕಾರ್ಯಗಳನ್ನು ಮಾಡಬೇಕು ಎಂದರು.
ಸಭೆಯಲ್ಲಿ ಗಂಗಾವತಿ, ಕಾರಟಗಿ, ಕನಕಗಿರಿ ತಾಲ್ಲೂಕಿನ ಈಡಿಗ ಸಮಾಜದ ಯುವಕರು ಹಾಜರಾಗಿದ್ದರು.
ಸಮಾಜದ ಬಸವರಾಜ ಕಾರಟಗಿ, ಬಸವರಾಜ ವಡ್ಡರಹಟ್ಟಿ, ಮಾರ್ಕಂಡೇಯ ದಾಸನಾಳ, ಮದ್ದಾನಪ್ಪ ಬಸಾಪಟ್ಟಣ, ರುದ್ರೇಶ್ ಆರ್ಹಾಳ, ಸುಜೀತ್, ರಮೇಶ್, ಮದನ್, ಪುನಿತ್ ಮಧುಸೂದನ್, ಶರಣಪ್ಪ ಮರಕುಂಬಿ, ವೆಂಕಟೇಶ ಗುಂಡೂರು, ನಾಗರಾಜ್ ಚಿಕ್ಕಜಂತಕಲ್, ವಿನೋದ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.