ADVERTISEMENT

ಗಂಗಾವತಿ | ಉದ್ಯೋಗಖಾತ್ರಿ ಕೆಲಸ ನೀಡುವಂತೆ ಒತ್ತಾಯಿಸಿ ಮನವಿ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 5:47 IST
Last Updated 30 ಜನವರಿ 2026, 5:47 IST
ಗಂಗಾವತಿ ತಾಲ್ಲೂಕಿನ ಮರಳಿ ಗ್ರಾ.ಪಂ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು
ಗಂಗಾವತಿ ತಾಲ್ಲೂಕಿನ ಮರಳಿ ಗ್ರಾ.ಪಂ ಆವರಣದಲ್ಲಿ ಗುರುವಾರ ಪ್ರತಿಭಟನೆ ನಡೆಯಿತು   

ಗಂಗಾವತಿ: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ಯಡಿ 100 ಮಾನವ ದಿನಗಳ ಕೂಲಿ ಕೆಲಸ ನೀಡಬೇಕೆಂದು ಒತ್ತಾಯಿಸಿ ಗುರುವಾರ ತಾಲ್ಲೂಕಿನ ಮರಳಿ, ಪ್ರಗತಿನಗರ, ಅಚಾರ ನರಸಾಪುರ, ಬಸವಣ್ಣಕ್ಯಾಂಪ್ ಗ್ರಾಮದ ಗ್ರಾಮಸ್ಥರು ಮರಳಿ ಗ್ರಾ.ಪಂ ಎದುರು ಪ್ರತಿಭಟನೆ ನಡೆಸಿದರು.

ನಂತರ ಗ್ರಾಮರಸ್ಥೆಲ್ಲರೂ ಸೇರಿ 2022ನೇ ಸಾಲಿನಿಂದ ಈ ವರೆಗೆ ಮೇಟಿಗಳಿಗೆ ಪ್ರೋತ್ಸಾಹ ಧನ ಸಂದಾಯ ಮಾಡಬೇ ಕು. 2024-25ನೇ ಸಾಲಿನ ಟ್ರಾಕ್ಟರ್ ಹಣ ಪಾವತಿ, ಕಾಯ ಕ ಬಂಧುಗಳ ವರ್ಗಾವಣೆ, ನರೇಗಾ ಕಾಯಕ ಮಿತ್ರರೊಬ್ಬರನ್ನ ಕಂಪ್ಯೂಟರ್ ಆಪರೇಟರ್ ಆಗಿ ನೇಮಕ ಮಾಡಬೇಕು. ನರೇಗಾ 6 ಫಾರ್ಮ್‌ಗೆ ಪಿಡಿಒ ಕಡ್ಡಾಯವಾಗಿ ಸಿಹಿ ಮಾಡಬೇಕು.‌ ನರೇಗಾದಡಿ 14-21 ಆಳು ಹಾಕಬೇಕು‌. ಎ ಲ್ಲ ಮೇಟಿಗಳಿಗೆ ಎನ್.ಎಂ.ಎಂ.ಎಸ್ ರಿಜಿಸ್ಟ್ರೇಷನ್ ಆ್ಯಪ್ ಇನ್ಸ್ಟಾಲ್ ಮಾಡಿಕೊಡಬೇಕು. ಕೆಲಸಕ್ಕೆ ಹೋದ ಸ್ಥಳದಲ್ಲಿ ಅಪಘಾತವಾಗಿ ಮೃತಪಟ್ಟರೆ, ಪ್ರೋತ್ಸಾಹಧನ ನೀಡಬೇಕು. ಈ ವರ್ಷ ಮಾರ್ಚ್ 15ರ ಒಳಗಾಗಿ 14ದಿನಗಳ ಕೆಲಸ ನೀಡಬೇಕು ಎಂದರು.

ದೊಡ್ಡಬಸಪ್ಪ ಕಲ್ಮಟ್ಟಿ, ಯಂಕಣ್ಣ, ಯಮನೂರಪ್ಪ, ಯಮ ನೂರಪ್ಪ ಚುಕ್ಕಾಡಿ,ಹನುಮಂತಪ್ಪ ಜಂಗ್ಲಿ ಸೇರಿ ಮಹಿಳಾ ಕಾರ್ಮಿಕರು ಉಪಸ್ಥಿತರಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.