
ಪ್ರಜಾವಾಣಿ ವಾರ್ತೆಮಹಾ ಶಿವರಾತ್ರಿ
ಗಂಗಾವತಿ: ನಗರದ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ತ್ರಯಂಬಕೇಶ್ವರ ಸೇವಾ ಟ್ರಸ್ಟ್ ಕಮಿಟಿಯಿಂದ ಶಿವರಾತ್ರಿ ನಿಮಿತ್ತ ವಿವಿಧ ರೀತಿಯ ಪೂಜೆ, ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಬೆಳಿಗ್ಗೆಯಿಂದಲೇ ಭಕ್ತರು ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ, ಅಭಿಷೇಕ ಹಾಗೂ ಶಿವನನಾಮ ಸ್ಮರಿಸಿದರು. ನಂತರ ಆಧ್ಯಾತ್ಮಿಕ ಉಪನ್ಯಾಸ ಜರುಗಿತು. ವಿವಿಧ ಕ್ಷೇತ್ರದಲ್ಲಿ ಸಾ ಧನೆಗೈದ ಸಾಧಕರನ್ನ ಸನ್ಮಾನಿಸಿ ಗೌರವಿಸಿದರು. ನಂತರ ಅನ್ನ ಸಂತರ್ಪಣೆ ಜರುಗಿತು.
ಎಸ್.ಬಿ. ಹಿರೇಮಠ, ಆದಯ್ಯಸ್ವಾಮಿ ಹಿರೇಮಠ, ಶಂಕ್ರಯ್ಯಸ್ವಾಮಿ ಹಿರೇಮಠ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ, ನಗರಸಭೆ ಸದಸ್ಯ ಮನೋಹರಸ್ವಾಮಿ ಹಿರೇಮಠ, ರಾಘವೇಂದ್ರ ಶೆಟ್ಟಿ, ಪರಮೇಶ್ವರ, ಗಿರೀಶ ಬಳ್ಳಾರಿ, ಶರಣಯ್ಯಸ್ವಾಮಿ, ಸಹನಾ ಹಿರೇಮಠ, ಕಸ್ತೂರಮ್ಮ ಕೆಂಬಾವಿ ಮಠ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.