ಕೊಪ್ಪಳ: ಇಲ್ಲಿನ ಗವಿಮಠ ಜಾತ್ರೆಯ ಅಂಗವಾಗಿ ಮಠದ ಆವರಣದಲ್ಲಿ ಗುರುವಾರ ಹಾಡಿನ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಜ.15ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಾತ್ರಾ ಮಹೋತ್ಸವದ ವಿವರವನ್ನು ಟ್ರೇಲರ್ ಒಳಗೊಂಡಿದೆ. ಗವಿಮಠದ ಮುಂಭಾಗದಲ್ಲಿ ಸ್ವಚ್ಛತಾ ಸೇವೆಗೈಯುತ್ತಿರುವ ಸಫಾಯಿ ಕರ್ಮಚಾರಿ ಸೇವಾ ಸಿಬ್ಬಂದಿ ಇದನ್ನು ಬಿಡುಗಡೆ ಮಾಡಿದರು.
ಹಾಡಿಗೆ ಕೊಪ್ಪಳದ ಗಾಯಕ ಸದಾಶಿವ ಪಾಟೀಲರು ಕಂಠ ನೀಡಿದ್ದು, ಗವಿಸಿದ್ಧೇಶ್ವರ ಮಹಾರಥೋತ್ಸವದ ದೃಶ್ಯ, ಶಿವಶಾಂತವೀರ ಹಾಗೂ ಮರಿಶಾಂತವೀರ ಸ್ವಾಮೀಜಿಗಳ ಮೂರ್ತಿಶಿಲ್ಪ, ಭಕ್ತಿ ಸಂಗೀತ, ಚಿಕೇನಕೊಪ್ಪದ ಶರಣರ ಧೀರ್ಘದಂಡ ನಮಸ್ಕಾರ, ಜಾತ್ರೆಗೆ ಆಗಮಿಸುವ ಭಕ್ತರ ಪಾದಯಾತ್ರೆ, ಸಾಮಾಜಿಕ ಜಾಗೃತಿ ಜಾಥಾ ಸನ್ನಿವೇಶಗಳನ್ನು ವಿಡಿಯೊ ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.