
ಕನಕಗಿರಿ: ದಕ್ಷಿಣ ಭಾರತದ ಕುಂಭಮೇಳ ಎಂದು ಖ್ಯಾತಿ ಪಡೆದಿರುವ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಬುಧವಾರ ತಾಲ್ಲೂಕಿನ ಓಬಳಬಂಡಿ ಗ್ರಾಮದವರು 11 ಸಾವಿರ ಶೇಂಗಾ ಹೋಳಿಗೆ,ರೊಟ್ಟಿ, ದವಸ ಧಾನ್ಯಗಳ ದೇಣಿಗೆಯನ್ನು ವಾಹನ ಮೂಲಕ ಕೊಪ್ಪಳದ ಗವಿಮಠಕ್ಕೆ ಕಳಿಸಿದರು.
ಮುಖಂಡ ನಾಗನಗೌಡ ಮಾತನಾಡಿ, ‘ಪ್ರತಿ ವರ್ಷದಂತೆ ಈ ವರ್ಷವು ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವದ ದಾಸೋಹಕ್ಕೆ ಗ್ರಾಮದ ವತಿಯಿಂದ ರೊಟ್ಟಿ, ಮಾದಲಿ, ತುಪ್ಪ ನೀಡಲಾಗುತ್ತಿತ್ತು, ಆದರೆ ಇದೇ ಸಲ 11 ಸಾವಿರ ಶೇಂಗಾ ಹೋಳಿಗೆ ತಯಾರು ಮಾಡಿ ಕಳಿಸುತ್ತಿದೇವೆ. ಈ ಕಾರ್ಯಕ್ಕೆ ಪುರುಷರು, ಮಹಿಳೆಯರು, ಮಕ್ಕಳು ಕೈ ಜೋಡಿಸಿದ್ದಾರೆ ಎಂದರು.
ಗ್ರಾಮಸ್ಥರಾದ ಹನುಮಂತಪ್ಪ ಇಂದರಗಿ, ಗುರುಬಸಪ್ಪ ಬಂಡಿ, ಬೆಟ್ಟಪ್ಪ ಹುಳ್ಳಿ, ಸುರೇಶ ಮಾಲೀಪಾಟೀಲ್, ರವಿ ಮಾದಿನಾಳ, ಮಂಜುನಾಥ ಸುಳೇಕಲ್, ಮಲ್ಲಪ್ಪ ಮನ್ನಾಪುರ, ದೇವಪ್ಪ ಪೂಜಾರ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.