ಅಳವಂಡಿ: ‘ಖಾದ್ಯತೈಲ ಉತ್ಪಾದನೆಯಲ್ಲಿ ಭಾರತ 2037ರ ಒಳಗೆ ಸ್ವಾವಲಂಬನೆ ಸಾಧಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರ ಮೇಕ್ ಇನ್ ಇಂಡಿಯಾ ನೀತಿಯಂತೆ ಆಮದು ಕಡಿಮೆಗೊಳಿಸುವ ದೃಷ್ಟಿಯಿಂದ ಅಡುಗೆ ತೈಲ ಉತ್ಪಾದನೆಗೆ ಒತ್ತು ನೀಡುವ ಕಾರ್ಯಕ್ರಮ ರೂಪಿಸಿದೆ’ ಎಂದು ಬೆಂಗಳೂರಿನ ತೋಟಗಾರಿಕೆ ಹೆಚ್ಚುವರಿ ನಿರ್ದೇಶಕ (ತಾಳೆಬೆಳೆ) ಪಿ.ಎಂ.ಸೊಬರದ ಹೇಳಿದರು.
ಸಮೀಪದ ಬಿಸರಳ್ಳಿ ಗ್ರಾಮದಲ್ಲಿ ಜಿಲ್ಲಾ ಪಂಚಾಯತ ಕೊಪ್ಪಳ, ತೋಟಗಾರಿಕೆ ಇಲಾಖೆ ಕೊಪ್ಪಳ, ತ್ರಿಎಪ್ ಆಯಿಲ್ ಪಾಮ್ ಸಹಯೋಗದಲ್ಲಿ ನಡೆದ 2025-26ನೇ ಸಾಲಿನ ಕೇಂದ್ರ ಪುರಸ್ಕೃತ ರಾಷ್ಟ್ರೀಯ ಖಾದ್ಯ ತೈಲ ಅಭಿಯಾನ ಯೋಜನೆಯಡಿ ತಾಳೆ ಬೆಳೆ ಬೇಸಾಯ ಕುರಿತು ನಡೆದ ತರಬೇತಿ ಹಾಗೂ ಮೆಗಾ ಡ್ರೈವ್ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ಅಡುಗೆ ಎಣ್ಣೆ ಆಮದಿಗೆ ಕೇಂದ್ರ ಸರ್ಕಾರ ವರ್ಷಕ್ಕೆ ಸುಮಾರು ₹1.30 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಇದನ್ನು ಕಡಿಮೆ ಮಾಡುವ ದೃಷ್ಟಿಯಿಂದ ರೈತರಗೆ ತಾಳೆ ಬೆಳೆ ಬೆಳೆಯಲು ಪ್ರೋತ್ಸಾಹ ನೀಡುತ್ತಿದೆ. ರೈತರು ಇದರ ಉಪಯೋಗ ಪಡಿಸಿಕೊಳ್ಳಬೇಕು’ ಎಂದರು.
ತೋಟಗಾರಿಕೆ ಉಪನಿರ್ದೆಶಕ ಕೃಷ್ಣ ಉಕ್ಕುಂದ ಮಾತನಾಡಿ, ‘ತಾಳೆ ಬೆಳೆಯುವ ರೈತರಿಗೆ ಉಚಿತವಾಗಿ ಗಿಡಗಳನ್ನು ನೀಡುತ್ತಿದೆ. 3 ವರ್ಷ ಗೊಬ್ಬರ ನೀಡುತ್ತದೆ. ಬಳಿಕ ಬೆಳೆಯನ್ನು ಸರ್ಕಾರವೇ ಬೆಂಬಲ ಬೆಲೆಯಡಿ ಖರಿದೀಸಲಿದೆ. 3 ವರ್ಷದ ಬಳಿಕ ತಾಳೆ ಫಸಲು ಬರಲಿದೆ. ಈ ಅವಧಿಯಲ್ಲಿ ಮಿಶ್ರ ಬೆಳೆಯನ್ನು ಬೆಳೆಯಬಹುದು’ ಎಂದರು.
ತ್ರಿಎಪ್ ಆಯಿಲ್ ಪಾಮ್ ಡಿಜಿಎಮ್ ಕರ್ನಾಟಕ ಬಸವಕುಮಾರ ಮಾತನಾಡಿದರು.
ತ್ರಿಎಪ್ ಆಯಿಲ್ ಪಾಮ್ ಸಹಾಯಕ ವ್ಯವಸ್ಥಾಪಕ ಧರ್ಮರಾಜ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕ ಯೋಗೀಶ್ವರ ಗಂಗಾವತಿ, ಶಿವಯೋಗಿ ಕುಷ್ಟಗಿ, ದುರ್ಗಾಪ್ರಸಾದ, ಮಂಜುನಾಥ ಲಿಂಗಣ್ಣವರ, ಸಹಾಯಕ ತೋಟಗಾರಿಕೆ ಅಧಿಕಾರಿಗಳಾದ ರುದ್ರಪ್ಪ ಬೀಡನಾಳ, ಬಸವರಾಜ ರಾಂಪೂರ, ಮಲ್ಲಿಕಾರ್ಜುನ ಬಂಡಿ, ವಿಜಯ ಮಹಾಂತೇಶ ರೈತರಾದ ಚನ್ನಬಸನಗೌಡ, ನಾಗಪ್ಪ ಬಿಕನಳ್ಳಿ, ನಾಗರಾಜ ಮೇಗಳಮನಿ, ಸೈಯದದಸಾಬ, ಮಂಜುಳಾ, ವಿಮಲಾಕ್ಷಿ, ನಿಂಗಮ್ಮ, ಲಕ್ಷ್ಮವ್ವ ಹಾಗೂ ರೈತರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.