ADVERTISEMENT

ಯಲಬುರ್ಗಾ | ಬಾಕಿ ವೇತನ ಪಾವತಿಗೆ ಅತಿಥಿ ಶಿಕ್ಷಕರ ಆಗ್ರಹ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2025, 6:00 IST
Last Updated 11 ಅಕ್ಟೋಬರ್ 2025, 6:00 IST
ಯಲಬುರ್ಗಾದಲ್ಲಿ ಅತಿಥಿ ಶಿಕ್ಷಕರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು
ಯಲಬುರ್ಗಾದಲ್ಲಿ ಅತಿಥಿ ಶಿಕ್ಷಕರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದರು   

ಯಲಬುರ್ಗಾ: ಕೆಕೆಆರ್‌ಡಿಬಿ ನೇಮಿಸಿದ ಕುಕನೂರು ಹಾಗೂ ಯಲಬುರ್ಗಾ ತಾಲ್ಲೂಕುಗಳ ಸರ್ಕಾರಿ ಪ್ರಾಥಮಿಕ ಶಾಲೆಗಳ ಅತಿಥಿ ಶಿಕ್ಷಕರಿಗೆ ಬಾಕಿ ವೇತನ ಪಾವತಿಸಬೇಕು ಎಂದು ಆಗ್ರಹಿಸಿ ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿಗೆ ಅತಿಥಿ ಶಿಕ್ಷಕರು ಮನವಿ ಸಲ್ಲಿಸಿದರು.

ಅತಿಥಿ ಶಿಕ್ಷಕರು ಹಾಗೂ ಡಿ ಗ್ರೂಪ್‌ ನೌಕರರು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ ಗೌಡ ಅವರಿಗೆ ಮನವಿ ಸಲ್ಲಿಸಿ,‘ಕಳೆದ ಒಂದು ವರ್ಷದಿಂದ ವೇತನವಿಲ್ಲದೆ ಕೆಲಸ ಮಾಡುತ್ತಿದ್ದೇವೆ. ಕೂಡಲೇ ವೇತನ ಬಿಡುಗಡೆ ಮಾಡಬೇಕು’ ಎಂದು ಮನವಿಯಲ್ಲಿ ಕೋರಿದ್ದಾರೆ.

‘ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಹೋಗಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರು ಹಾಗೂ ಆಯಾಗಳು ವರ್ಷಗಟ್ಟಲೇ ವೇತನವಿಲ್ಲದೆ ಹಾಗೆಯೇ ದುಡಿಯುತ್ತಿರುವುದರಿಂದ ಅವರ ಕುಟುಂಬ ನಿರ್ವಹಣೆ ಕಷ್ಟವಾಗುತ್ತಿದೆ. ಈ ಬಗ್ಗೆ ಮೇಲಧಿಕಾರಿಗಳು ಹಾಗೂ ಶಾಸಕರ ಗಮನಕ್ಕೆ ತರಲಾಗಿದೆ. ಆದರೂ ಅನುದಾನ ಬಿಡುಗಡೆಯಾಗಿಲ್ಲ’ ಎಂದರು.

ADVERTISEMENT

ಅತಿಥಿ ಶಿಕ್ಷಕರ ಸಂಘದ ಯಲಬುರ್ಗಾ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ ಶರಣಪ್ಪ ಏಳುಗುಡ್ಡದ, ವಸಂತಕುಮಾರ ಗುಡಿ, ರಮೇಶ ಗಾಣದಾಳ, ಮಂಜುಳಾ ಗುತ್ತೂರ, ಮಹಾದೇವಿ, ಮರ್ತುಜಾ, ದಶರಥ, ಚೈತ್ರಾ ಅಂಗಡಿ, ಸಂಗೀತಾ ಯಲಬುರ್ಗಾ, ಇಂದಿರಾಬಾಯಿ, ಸುಜಾತ, ಶಿವರಾಜ, ಭಾಗೀರಥಿ, ಅಶ್ವಿನಿ, ಶರಣಪ್ಪ, ಯಲ್ಲಪ್ಪ, ಸುಮರೀನ್, ಗೀತಾ, ಅಕ್ಕಮ್ಮ, ಹನುಮೇಶ, ಬಸವರಾಜ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.