ಕೊಪ್ಪಳ: ಐಎಎಸ್ ಹಾಗೂ ಕೆಎಎಸ್ ಅಧಿಕಾರಿಗಳಾಗಲು ಬಯಸುವ ಆಕಾಂಕ್ಷಿಗಳಿಗಾಗಿ ‘ಪ್ರಜಾವಾಣಿ’ ಹಾಗೂ ‘ಡೆಕ್ಕನ್ ಹೆರಾಲ್ಡ್’ ಪತ್ರಿಕಾ ಬಳಗವು ‘ಇನ್‌ಸೈಟ್ಸ್ ಐಎಎಸ್’ ಸಂಸ್ಥೆಯ ಸಹಭಾಗಿತ್ವದಲ್ಲಿ ಜುಲೈ 26ರಂದು ನಗರದ ಅಶೋಕ ಸರ್ಕಲ್ ಬಳಿ ಇರುವ ಸಾಹಿತ್ಯ ಭವನದಲ್ಲಿ ‘ಗೈಡಿಂಗ್ ಫೋರ್ಸ್’ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದೆ. ಎಲ್ಲರಿಗೂ ಉಚಿತ ಪ್ರವೇಶವಿದೆ.
ಅಂದು ಬೆಳಿಗ್ಗೆ 9.30ಕ್ಕೆ ಕಾರ್ಯಕ್ರಮ ಆರಂಭವಾಗಲಿದ್ದು, 9 ಗಂಟೆಯಿಂದಲೇ ನೋಂದಣಿ ಶುರುವಾಗಲಿದೆ. ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆಯ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ್ ಎಲ್. ಅರಸಿದ್ಧಿ ಅವರು ಕಾರ್ಯಕ್ರಮ ಉದ್ಘಾಟಿಸುವರು. ಜೊತೆಗೆ ತಾವು ಜೀವನದಲ್ಲಿ ಯಶಸ್ಸು ಕಂಡ ಸಾಧನೆಯ ಅನುಭವದ ಕಥನವನ್ನೂ ಹಂಚಿಕೊಳ್ಳಲಿದ್ದಾರೆ.
ಇನ್‌ಸೈಟ್ಸ್ ಐಎಎಸ್ ಸಂಸ್ಥೆಯ ಸಂಸ್ಥಾಪಕ ಮತ್ತು ನಿರ್ದೇಶಕರೂ ಆಗಿರುವ ವಿನಯ್ ಕುಮಾರ್ ಜಿ.ಬಿ., ಸಾಧನಾ ಅಕಾಡೆಮಿಯ ನಿರ್ದೇಶಕರೂ ಆದ ಕಾಲೇಜು ಶಿಕ್ಷಣ ಇಲಾಖೆಯ ವಿಶೇಷ ಅಧಿಕಾರಿ ಮಂಜುನಾಥ ಬಿ. ಅವರು ಸ್ಪರ್ಧಾತ್ಮಕ ಪರೀಕ್ಷೆಗಳ ಯಶಸ್ಸಿನ ಮೆಟ್ಟಿಲುಗಳನ್ನು ಹೇಳಿಕೊಡಲಿದ್ದಾರೆ.
ಹೆಸರು ನೋಂದಣಿಗಾಗಿ ಆಸಕ್ತ ವಿದ್ಯಾರ್ಥಿಗಳು ಸಂತೋಷ್ (9902751468) ಹಾಗೂ ವೀರೇಶ್ ಶಿಳ್ಳಿನ್ (9606082252) ಅವರನ್ನು ಸಂಪರ್ಕಿಸಬಹುದು.
Highlights - ಕಾರ್ಯಾಗಾರದಲ್ಲಿ ಎಲ್ಲರಿಗೂ ಉಚಿತ ಪ್ರವೇಶ ತಜ್ಞ ಸಂಪನ್ಮೂಲ ವ್ಯಕ್ತಿಗಳಿಂದ ಮಾರ್ಗದರ್ಶನ ಅನುಭವ ಕಥನ ಹಂಚಿಕೊಳ್ಳಲಿರುವ ಅಧಿಕಾರಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.