
ಪ್ರಾತಿನಿಧಿಕ ಚಿತ್ರ
ಕುಕನೂರು: ‘ವಿಬಿ ಜಿ ರಾಮ್ ಜಿ ಯೋಜನೆ ಅಡಿಯಲ್ಲಿ 125 ದಿನಗಳ ಉದ್ಯೋಗ ಗ್ಯಾರಂಟಿ ಕೊಡಲಾಗಿದೆ. ಕಾಂಗ್ರೆಸ್ ಅವಧಿಯಲ್ಲಿ ಹಣವನ್ನು ಸಕಾಲದಲ್ಲಿ ಪಾವತಿಸದೆ ತಡವಾಗಿ ಕೂಲಿ ಪಾವತಿಸಲಾಗುತ್ತಿತ್ತು. ಆದರೆ ಈಗ ಸಕಾಲದಲ್ಲಿ ಕೂಲಿ ಪಾವತಿಗೆ ಕ್ರಮ ಕೈಗೊಳ್ಳಲಿದ್ದೇವೆ’ ಎಂದು ಹಾಲಪ್ಪ ಆಚಾರ್ ಹೇಳಿದರು.
ತಾಲ್ಲೂಕಿನ ಮಸಬಹಂಚಿನಾಳ ಗ್ರಾಮದ ಭಾಜಪ ಕಾರ್ಯದಲ್ಲಿ ಮಾಧ್ಯಮದರೊಂದಿಗೆ ಮಾತನಾಡಿ,
ವಿಕಸಿತ ಭಾರತಕ್ಕಾಗಿ ವಿಕಸಿತ ಗ್ರಾಮಗಳ ಅಗತ್ಯವಿದೆ. ಮನ್ ನರೇಗಾದಂತೆ ಒಂದು ಕಡೆಯ ಮಣ್ಣನ್ನು ಇನ್ನೊಂದು ಕಡೆ ಹಾಕಿ ಹಣ ಪಡೆಯುವುದನ್ನು ನಾವು ಸಹಿಸುವುದಿಲ್ಲ. ಪಿಎಂ ಗತಿ ಶಕ್ತಿ ಮತ್ತು ತಂತ್ರಜ್ಞಾನದ ಬಳಕೆ ಮಾಡಿ ಗ್ರಾಮ ಪಂಚಾಯಿತಿಯ ಅಧಿಕಾರ ಹೆಚ್ಚಿಸಿದ್ದೇವೆ. ವಿಕಾಸಿತ ಗ್ರಾಮ ಪಂಚಾಯಿತಿಯ ಯೋಜನೆ ಗ್ರಾಮ ಸಭೆಯಲ್ಲಿ ರೂಪಿಸಲಾಗುತ್ತಿದೆ ಎಂದರು.
ಮಹಾತ್ಮ ಗಾಂಧಿ ನೆರೇಗಾ ಯೋಜನೆ ಕುರಿತು ಸುಳ್ಳು ಮತ್ತು ಆಸತ್ಯವನ್ನು ಮಾನ್ಯ ರಾಜ್ಯಪಾಲರ ಮೂಲಕ ಹೇಳಿಸಲು ರಾಜ್ಯ ಸರ್ಕಾರ ಬಯಸಿತ್ತು. ಕಾಂಗ್ರೆಸ್ ಪಕ್ಷವು ಸುಳ್ಳಿನ ಯಂತ್ರ ಎಂದರು.
ಕಾಂಗ್ರೆಸ್ ಸುಳ್ಳಿನ ಯಂತ್ರ. ವಿಧಾನಸಭೆಯಲ್ಲಿ ಇಂದು ಪ್ರಜಾಸತ್ತಾತ್ಮಕ ಮೌಲ್ಯಗಳ ಕೊಲೆಯಾಗಿದೆ. ಸಂವಿಧಾನಕ್ಕೂ ಧಕ್ಕೆ ಮಾಡಿದ್ದಾರೆ. ರಾಜ್ಯ ಸರ್ಕಾರ ಸಿದ್ಧಪಡಿಸಿ ನೀಡಿದ ಮಾನ್ಯ ಗವರ್ನರ್ ಅವರ ಭಾಷಣದಲ್ಲಿ ಸುಳ್ಳುಗಳು ಇದ್ದವು ಅದನ್ನು ಓದಲು ಸಾಧ್ಯವಿರಲಿಲ್ಲ ಎಂದರು.
ಕಾಂಗ್ರೆಸ್ ಎಂದರೆ ಕಮಿಷನ್, ಭ್ರಷ್ಟಾಚಾರ ಮತ್ತು ಕೆಟ್ಟ ಶಾಸನದ ಗ್ಯಾರಂಟಿ ಕೊಡುವ ಪಕ್ಷ, ತನ್ನ ವೈಫಲ್ಯ ಆಸಫಲತೆಯನ್ನು ಮುಚ್ಚಿಡಲು ಅದು ಕೇಂದ್ರ ಸರ್ಕಾರ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದರು.
ಮನ್ ರೇಗಾದಲ್ಲಿ ಕಾಂಗ್ರೆಸ್ ಪಕ್ಷ ಮಾಡಿದ ಭ್ರಷ್ಟಾಚಾರದ ಪೈಕಿ ಯಾದಗಿರಿ ಜಿಲ್ಲೆಯಲ್ಲಿ ನಡೆದ ಭ್ರಷ್ಟಾಚಾರವು ದೇಶ ಅಂತರಾಷ್ಟ್ರೀಯ ಸುದ್ದಿಯಾಗಿ ಪ್ರಕಟವಾಗಿತ್ತು. ಪುರುಷರು ಸೀರೆ ಧರಿಸಿ ಮಹಿಳೆಯಾಗಿ ಮನ್ ರೇಗಾದ ಹಣ ಲೂಟಿ ಮಾಡಿದ್ದರು ಎಂದರು.
ನರೇಗಾದ ಭ್ರಷ್ಟಾಚಾರವನ್ನು ದೂರ ಮಾಡಲು ವಿಕಾಸಿತ ಭಾರತ್ ಜಿ ರಾಮ್ ಜಿ ಯೋಜನೆಯನ್ನು ಕೇಂದ್ರ ಸರ್ಕಾರ ಮೋದಿಜಿ ಅವರ ನೇತೃತ್ವದಲ್ಲಿ ಜಾರಿಗೊಳಿಸಿದೆ ಎಂದರು.
ಅಬಕಾರಿ ಇಲಾಖೆಯಲ್ಲಿ ಅಬಕಾರಿ ಸಚಿವರೇ ನೇರವಾಗಿ ತಮ್ಮ ಮಗನ ಮೂಲಕ ಸಾವಿರಾರು ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ. ಈ ಭ್ರಷ್ಟಾಚಾರವನ್ನು ನೋಡಿದರೆ ರಾಜ್ಯ ಸರ್ಕಾರ ಯಾವ ಸ್ಥಿತಿಯಲ್ಲಿದೆ ಎನ್ನುವುದು ಗೊತ್ತಾಗುತ್ತದೆ ಎಂದು ಆರೋಪಿಸಿದರು.
ಮಂಡಲದ ತಾಲ್ಲೂಕ ಅಧ್ಯಕ್ಷ ಮಾರುತಿ ಗಾವರಾಳ, ವಿಶ್ವನಾಥ್ ಮರಿಬಸಪ್ಪನವರ್, ಅಮರೇಶ್ ಹುಬ್ಬಳ್ಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.