ADVERTISEMENT

ಹಾಲವರ್ತಿ: ದಾಂಪತ್ಯ ಬದುಕಿಗೆ14 ಜೋಡಿ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2026, 7:01 IST
Last Updated 23 ಫೆಬ್ರುವರಿ 2026, 7:01 IST
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ಉದ್ಘಾಟಿಸಿದರು
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಸ್ವಾಮೀಜಿಗಳು ಹಾಗೂ ಜನಪ್ರತಿನಿಧಿಗಳು ಉದ್ಘಾಟಿಸಿದರು   

ಕೊಪ್ಪಳ: ‘ಹೆಣ್ಣುಮಕ್ಕಳು ಗಂಡನ ಮನೆಗೆ ಹೋಗುವಾಗ ಅಳುವುದು ಸಹಜ. ಆದರೆ ಮರುದಿನದಿಂದ ಅವರು ಜೀವನ ಪರ್ಯಂತ ನಗುತ್ತಿರಬೇಕು’ ಎಂದು ಕಾಗಿನೆಲೆ ಕನಕ ಗುರುಪೀಠ ಹೊಸದುರ್ಗ ಶಾಖಾ ಮಠದ ಪೀಠಾಧಿಪತಿ ಈಶ್ವರಾನಂದ ಪುರಿ ಸ್ವಾಮೀಜಿ ಹೇಳಿದರು.

ತಾಲೂಕಿನ ಹಾಲವರ್ತಿ ಗ್ರಾಮದ ಕನಕಗುರು ಪೀಠದ ಶಾಖ ಮಠದ ಜಡೇಶ್ವರ ಜಾತ್ರೆ ನಿಮಿತ್ತ ಹಮ್ಮಿಕೊಂಡಿದ್ದ 14 ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ‘ಹೆಂಡತಿಯನ್ನು ಪ್ರೀತಿಯಿಂದ ತವರು ಮನೆಗೆ ಕಳಿಸಿ. ಆದರೆ ವರದಕ್ಷಿಣೆಗಾಗಿ ಹೆಂಡತಿಯನ್ನು ಯಾವತ್ತೂ ತವರು ಮನೆಗೆ ಕಳಿಸಬೇಡಿ’ ಎಂದು ಸಲಹೆ ನೀಡಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ  ‘ಸಾಮೂಹಿಕ ವಿವಾಹಗಳು ಹೆಚ್ಚು ನಡೆಯಬೇಕು. ಇದರಿಂದ ಒಂದು ವೆಚ್ಚಕ್ಕೆ ಕಡಿವಾಣ ಬೀಳುತ್ತದೆ. ಬಡವರಿಗೆ ಸಾಲದ ಹೊರೆ ತಪ್ಪುತ್ತದೆ. ಗ್ರಾಮಗಳಲ್ಲಿ ಇಂಥ ವಿವಾಹಗಳು ನಡೆಯುವುದರಿಂದ ಗ್ರಾಮಸ್ಥರಲ್ಲಿ ಒಗ್ಗಟ್ಟು ಹಾಗೂ ಬಾಂಧವ್ಯ ವೃದ್ಧಿಯಾಗುತ್ತದೆ’ ಎಂದರು.

ADVERTISEMENT

ಕನಕ ಗುರುಪೀಠದ ಕೆ.ಆರ್‌. ನಗರ ಸಂಸ್ಥಾನ ಮಠದ ಶಿವಾನಂದಪುರಿ ಸ್ವಾಮೀಜಿ, ಬಾದಿಮನಾಳ ಹಾಗೂ ಹಾಲವರ್ತಿ ಪೀಠದ ಶಿವಸಿದ್ದೇಶ್ವರ ಸ್ವಾಮೀಜಿ, ಮಾಜಿ ಶಾಸಕ ಕೆ ಬಸವರಾಜ ಹಿಟ್ನಾಳ, ಹಿಂದುಳಿದ ಜಾತಿಗಳ ಒಕ್ಕೂಟದ ರಾಜ್ಯಾಧ್ಯಕ್ಷ ಕೆ.ಎಂ. ರಾಮಚಂದ್ರಪ್ಪ, ಎಂಎಸ್‌ಪಿಎಲ್‌ ಕಂಪನಿ ಇಡಿ ಪ್ರಭು, ಎಸ್.ಕೆ. ಸ್ಟೀಲ್ ಕಂಪನಿ ವ್ಯವಸ್ಥಾಪಕ ಪ್ರಭು, ಮುಖಂಡರಾದ ಭರಮಪ್ಪ ನಗರ, ಗೂಳಪ್ಪ ಹಲಗೇರಿ, ವೆಂಕಟೇಶ್ ಬಾರಕೇರ, ಹನುಮಂತಪ್ಪ ಅರಸನಕೇರಿ, ಬಸವರಾಜ ಬಂಗಾಳಿ, ಪತ್ರಕರ್ತರಾದ ದೇವು ನಾಗನೂರ, ಕುಬೇರ ಮಜ್ಜಿಗಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಸಾಮೂಹಿಕ ವಿವಾಹದಿಂದ ಬಡವರಿಗೆ ಸಾಕಷ್ಟು ಅನುಕೂಲವಾಗಲಿದೆ. ಹೊಸ ಬದುಕಿಗೆ ಪದಾರ್ಪಣೆ ಮಾಡಿದ ನವ ದಂಪತಿ ತಮ್ಮ ಮಕ್ಕಳ ಭವಿಷ್ಯವನ್ನು ಸುಂದರವಾಗಿ ರೂಪಿಸಿ ಉನ್ನತ ಹುದ್ದೆಗೇರಿಸುವ ಕೆಲಸ ಮಾಡಲಿ.
– ಜಿ.ಬಿ. ವಿನಯಕುಮಾರ್, ಇನ್‌ಸೈಟ್‌ ಐಎಎಸ್ ಸಂಸ್ಥಾಪಕ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.