ADVERTISEMENT

ಹನುಮಸಾಗರ: ಶಿಲಾಮಂಟಪಕ್ಕೆ ಶಿಲಾನ್ಯಾಸ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2023, 16:04 IST
Last Updated 11 ಡಿಸೆಂಬರ್ 2023, 16:04 IST
ಕುಷ್ಟಗಿ ತಾಲ್ಲೂಕು ಹನುಮಸಾಗರದ ಶಿಲಾಮಂಟಪ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಇತರರು ಪಾಲ್ಗೊಂಡಿದ್ದರು
ಕುಷ್ಟಗಿ ತಾಲ್ಲೂಕು ಹನುಮಸಾಗರದ ಶಿಲಾಮಂಟಪ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಮುಪ್ಪಿನ ಬಸವಲಿಂಗ ಸ್ವಾಮೀಜಿ, ಇತರರು ಪಾಲ್ಗೊಂಡಿದ್ದರು   

ಕುಷ್ಟಗಿ: ತಾಲ್ಲೂಕಿನ ಹನುಮಸಾಗರ ಗ್ರಾಮದಲ್ಲಿ ರೂ 50 ಅಂದಾಜು ವೆಚ್ಚದಲ್ಲಿ ಅನ್ನದಾನೇಶ್ವರ ಶಿಲಾಮಂಟಪ ನಿರ್ಮಿಸಲಾಗುತ್ತದೆ ಎಂದು ಹಾಲಕೆರೆ ಮಠದ ಮುಪ್ಪಿನ ಬಸವಲಿಂಗ ಸ್ವಾಮೀಜಿ ಹೇಳಿದರು.

ಶಿಲಾನ್ಯಾಸ ನೆರವೇರಿಸಿ ಮಾತನಾಡಿದ ಅವರು, ಶಿಲಾಮಂಟಪ ನಿರ್ಮಿಸುವ ಮೂಲಕ ಲಿಂ.ಡಾ.ಅಭಿನವ ಅನ್ನದಾನ ಸ್ವಾಮೀಜಿಯವರ ಕನಸು ನನಸಾಗಿಸಲು ಶ್ರೀಮಠ ಮುಂದಾಗಿದ್ದು ಅದಕ್ಕೆ ಭಕ್ತರು, ಸಾರ್ವಜನಿಕರ ಸಹಾಯ ಸಹಕಾರವೂ ಅಗತ್ಯವಾಗಿದೆ ಎಂದರು.

ಪ್ರಮುಖರಾದ ಅಂದಾನಯ್ಯ ಸೊಪ್ಪಿಮಠ, ಕರಿಸಿದ್ದಪ್ಪ ಕುಷ್ಟಗಿ, ಬಸವರಾಜ ಹಳ್ಳೂರು, ಬಸವಂತಪ್ಪ ಸಜ್ಜನ, ಸಂಗಯ್ಯ ವಸ್ತ್ರದ, ವಿಶ್ವನಾಥ ಕನ್ನೂರ, ರುದ್ರಗೌಡ ಗೌಡಪ್ಪನವರ, ಮುತ್ತಣ್ಣ ಬಾಚಲಾಪುರ, ಮಹಾಂತೇಶ ಅಗಸಿಮುಂದಿನ, ಶಿವಪ್ಪ ಕಂಪ್ಲಿ, ಪ್ರಭು ಬ್ಯಾಳಿ ಸೇರಿದಂತೆ ಗ್ರಾಮದ ವಿವಿಧ ಸಮುದಾಯಗಳ ಅನೇಕ ಹಿರಿಯರು ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.