ಹನುಮಸಾಗರ: ಕೊಪ್ಪಳ ಜಿಲ್ಲೆಯ ಅತಿದೊಡ್ಡ ಹೋಬಳಿಯೆನಿಸಿಕೊಳ್ಳುವ ಹನುಮಸಾಗರ ಈಗ ಆಡಳಿತಾತ್ಮಕ ನಿರ್ಲಕ್ಷ್ಯದ ಬಲಿಯಾಗಿದೆ. ಹೋಬಳಿಯ 7 ಗ್ರಾಮ ಪಂಚಾಯತಿಗಳು ಮತ್ತು 49 ಹಳ್ಳಿಗಳ ಜನರು ಆಧಾರ್ ತಿದ್ದುಪಡಿ ಮತ್ತು ಹೊಸ ನೋಂದಣೆಗೆ ಬಳಸಲಾಗದೇ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಕಳೆದ ಒಂದೂವರೆ ವರ್ಷಗಳಿಂದ ಹೋಬಳಿ ಮಟ್ಟದಲ್ಲಿ ಆಧಾರ್ ಸೇವೆ ಲಭ್ಯವಿಲ್ಲ. ಸಣ್ಣ ತಿದ್ದುಪಡಿಯಿಗೂ ಜನ 30 ಕಿಲೋಮೀಟರ್ ದೂರದ ತಾಲೂಕು ಕೇಂದ್ರಕ್ಕೇ ಹೀಗಬೇಕು. ಹಿರಿಯ ನಾಗರಿಕರು, ಅಂಗವಿಕಲರು, ಬಡವವರು, ಮಹಿಳೆಯರಿಗೆ ತೊಂದರೆಯಾಗಿದೆ.
ಮಕ್ಕಳ ಶಾಲಾ ಪ್ರವೇಶ, ಪಿಂಚಣಿ, ಸರ್ಕಾರದ ಯೋಜನೆಗಳ ಲಾಭ, ಬ್ಯಾಂಕ್ ಸೇವೆಗಳು ಎಲ್ಲಕ್ಕೂ ಆಧಾರ್ ಬೇಕು. ಆಧಾರ್ ಕಾರ್ಡ್ ತಿದ್ದುಪಡಿ ಇಲ್ಲದ ಕಾರಣದಿಂದ ತಡವಾಗುತ್ತಿದೆ, ಇತ್ತೀಚಿಗೆ ಬ್ಯಾಂಕ್‌ಗಳಲ್ಲಿ ಆಧಾರ್ ತಿದ್ದುಪಡಿ ಸೇವೆಯನ್ನು ನಿರ್ಮಿಸಲಾಗಿತ್ತು, ಸರ್ವರ್ ಇಲ್ಲದ ಕಾರಣ ಆರು ತಿಂಗಳಿಂದ ಸರಿಯಾಗಿ ಆಧಾರ್ ಕಾರ್ಡ್ ಮಾಡುವವರ ಕೊರತೆ ಉಂಟಾಗಿದೆ.
ಸ್ಥಳೀಯರ ಪ್ರಕಾರ, ಹನುಮಸಾಗರದಲ್ಲಿರುವ ನಾಡಕಚೇರಿ ಕಟ್ಟಡ, ಪಂಚಾಯಿತಿ ಕಚೇರಿ ಮತ್ತು ಸಾರ್ವಜನಿಕ ಸೇವಾ ಕೇಂದ್ರಗಳು ಇದ್ದರೂ, ಆಧಾರ್ ಕಾರ್ಡ್ ತಿದ್ದುಪಡಿಗೆ ಒಂದು ಕೇಂದ್ರ ನಿಯೋಜನೆ ಇಲ್ಲದಿರುವುದು ಭಾರಿ ಕೊರತೆ ಉಂಟುಮಾಡಿದೆ.
ಜಿಲ್ಲಾಧಿಕಾರಿ, ತಹಶೀಲ್ದಾರ್ ತಕ್ಷಣವೇ ಕ್ರಮ ಕೈಗೊಂಡು ಹನುಮಸಾಗರದಲ್ಲಿ ಆಧಾರ್ ತಿದ್ದುಪಡಿ ಕೇಂದ್ರ ಆರಂಭಿಸಬೇಕು ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.
ಕೆಲಸ ಬಿಟ್ಟು ದಿನಪೂರ್ತಿ ಅಲೆದಾಟ ಆರು ತಿಂಗಳಿಂದ ಸಾರ್ವಜನಿಕರಿಗೆ ಸಮಸ್ಯೆ
ಒಂದು ಸರಳ ಆಧಾರ್ ತಿದ್ದುಪಡಿಗೆ ನಾವು 30 ಕಿಲೋಮೀಟರ್ ಹಾದು ಹೋಗುತ್ತಿದ್ದೇವೆ. ಸ್ವಾತಂತ್ರ್ಯಭಾರತದಲ್ಲಿ ಹಳ್ಳಿಗರಿಗೆ ಮೂಲಸೌಲಭ್ಯಗಳು ಇನ್ನೂ ದೂರವಾಗಿವೆ ಎಂಬುದರ ಜೀವಂತ ಸಾಕ್ಷಿರಾಹುಲ್ ದೇವಸಿಂಗ್ ಜಿಲ್ಲಾ ಉಪಾಧ್ಯಕ್ಷ ಕೆಆರ್‌ಎಸ್ ಪಕ್ಷ ಕೊಪ್ಪಳ
ಒಂದೂವರೆ ವರ್ಷಗಳಿಂದ ಹೋಬಳಿಯ ಜನ ಆಧಾರ್ ತಿದ್ದುಪಡಿಗೆ ತಾಲ್ಲೂಕು ಕಚೇರಿಗಳ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ಇಲ್ಲಿಯೇ ತಾತ್ಕಾಲಿಕ ಆಧಾರ್ ಕೇಂದ್ರ ಸ್ಥಾಪನೆ ಮಾಡುವುದು ತುರ್ತು ಅಗತ್ಯವಾಗಿದೆಯಮನಪ್ಪ ಮಡಿವಾಳರ ರೈತ ಸಂಘದ ಘಟಕದ ಅಧ್ಯಕ್ಷ
ಆಧಾರ್ ಕಾರ್ಡ್ ತಿದ್ದುಪಡಿ ಕೇಂದ್ರ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ಬಂದಿದೆ. ನಾವೂ ಮನವಿ ಸಲ್ಲಿಸಿದ್ದೇವೆ. ಸಮಸ್ಯೆಯನ್ನು ಪರಿಹರಿಸಲಾಗುವುದುಅಶೋಕ ಶಿಗ್ಗಾವಿ ತಹಶೀಲ್ದಾರ್ ಕುಷ್ಟಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.