ADVERTISEMENT

HDKಬಂಧಿಸುವುದಾಗಿ ಹೇಳಿಲ್ಲ; ಸಂದರ್ಭ ಬಂದರೆ ಮುಲಾಜಿಲ್ಲದೆ ಕ್ರಮ: CM ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2024, 8:21 IST
Last Updated 21 ಆಗಸ್ಟ್ 2024, 8:21 IST
   

ಕೊಪ್ಪಳ: ನಿಯಮ ಉಲ್ಲಂಘಿಸಿ ಗಣಿ ಕಂಪನಿಗೆ ಮಂಜೂರಾತಿ ನೀಡಿದ ವಿಚಾರದಲ್ಲಿ ಎಚ್.ಡಿ. ಕುಮಾರಸ್ವಾಮಿ ಅವರನ್ನು ಬಂಧಿಸುವುದಾಗಿ ಎಲ್ಲಿಯೂ ಹೇಳಿಲ್ಲ. ಸಂದರ್ಭ ಬಂದರೆ ಮುಲಾಜಿಲ್ಲದೇ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಆಲಮಟ್ಟಿಗೆ ಬಾಗಿನ ಅರ್ಪಿಸಲು ತೆರಳುವ‌ ಮೊದಲು ಬುಧವಾರ ಇಲ್ಲಿಗೆ ಸಮೀಪದ ಗಿಣಿಗೇರಿಯಲ್ಲಿರುವ ಎರ್ ಸ್ಕ್ರಿಪ್ಟ್ ನಲ್ಲಿ ಸುದ್ದಿಗಾರರ ಜೊತೆ ಮಾತನಾಡಿ, ಕುಮಾರಸ್ವಾಮಿ ಅವರನ್ನು ಬಂಧಿಸುವ ಸಂದರ್ಭ ಬಂದರೆ ಬಂಧಿಸುವುದರಲ್ಲಿ ಹಿಂದೇಟು ಹಾಕುವುದಿಲ್ಲ. ಈಗ ಅಂಥ ಸನ್ನಿವೇಶ ಇಲ್ಲ ಎಂದರು.

ಕುಮಾರಸ್ವಾಮಿಗೆ ಭಯ ಶುರುವಾಗಿದೆ. ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುತ್ತಾರೆ ಎನ್ನುವ ಆತಂಕವಿದೆ. ತನಿಖೆ ಮಾಡಿ‌ ದಾಖಲೆಗಳನ್ನು ಸಂಗ್ರಹಿಸಿದ ಬಳಿಕ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡುವಂತೆ ಲೋಕಾಯುಕ್ತರು ಕೇಳಿದ್ದಾರೆ ಎಂದರು.

ADVERTISEMENT

ಪ್ರಾಸಿಕ್ಯೂಷನ್ ಗೆ ಅನುಮತಿ ನೀಡುವ ವಿಚಾರದಲ್ಲಿ ರಾಜ್ಯಪಾಲರು ತಾರತಮ್ಯ ಮಾಡಿದ್ದಾರೆ. ಕುಮಾರಸ್ವಾಮಿ ಬಾಯಿಗೆ ಬಂದಂತೆ ಮಾತನಾಡುತ್ತಾರೆ. ಅವರ ಮಾತುಗಳು ಹಿಟ್ ಅಂಡ್ ರನ್ ನಂತೆ ಇರುತ್ತವೆ. ಜೇಬಿನಲ್ಲಿ ಪೆನ್ ಡ್ರೈವ್ ಇದೆ ಎಂದರು. ಒಂದೂ ದಿನ ತೋರಿಸಲಿಲ್ಲ. ನೀವು (ಮಾಧ್ಯಮದವರು) ಕುಮಾರಸ್ವಾಮಿ ಹೇಳುವುದನ್ನು ಕೇಳುತ್ತಿದ್ದರಲ್ಲ ಎಂದು ಪ್ರಶ್ನಿಸಿದರು.

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಬೃಹತ್ ‌ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.