ADVERTISEMENT

ಅಂಗವಿಕಲರ ಜೀವನ ನಮ್ಮೆಲ್ಲರಿಗೂ ಸ್ಪೂರ್ತಿ

ಅಂಗವಿಕಲರಿಗೆ ಉಚಿತ ಸಹಾಯ, ಸಲಕರಣೆ ವಿತರಣಾ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2018, 14:12 IST
Last Updated 21 ಡಿಸೆಂಬರ್ 2018, 14:12 IST
ಕೊಪ್ಪಳದ ಸಾಹಿತ್ಯಭವನದಲ್ಲಿ ಶುಕ್ರವಾರ ಅಲಿಂಕೋ ಸಂಸ್ಥೆ ಹಾಗೂ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸಲಾಯಿತು
ಕೊಪ್ಪಳದ ಸಾಹಿತ್ಯಭವನದಲ್ಲಿ ಶುಕ್ರವಾರ ಅಲಿಂಕೋ ಸಂಸ್ಥೆ ಹಾಗೂ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಆಶ್ರಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಂಗವಿಕಲರಿಗೆ ಉಚಿತವಾಗಿ ಸಲಕರಣೆಗಳನ್ನು ವಿತರಿಸಲಾಯಿತು   

ಕೊಪ್ಪಳ: ಬಹಳಷ್ಟು ಕಷ್ಟದಿಂದ ಜೀವನ ಸಾಗಿಸುವ ಅಂಗವಿಕಲರು ನಮ್ಮೆಲ್ಲರಿಗೂ ಸ್ಪೂರ್ತಿಯಾಗಿದ್ದಾರೆ ಎಂದು ಪ್ರೊಬೆಷನರಿ ಐಎಎಸ್ ಅಧಿಕಾರಿಅಕ್ಷಯ್‌ ಶ್ರೀಧರ ಹೇಳಿದರು.

ನಗರದ ಸಾಹಿತ್ಯಭವನದಲ್ಲಿ ಶುಕ್ರವಾರ ಅಲಿಂಕೋ ಸಂಸ್ಥೆ ಹಾಗೂ ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಆಶ್ರಯದಲ್ಲಿ ಸಿಎಸ್‌ಆಎರ್‌ ಕಾರ್ಯಕ್ರಮದ ಅಡಿಯಲ್ಲಿ ನಡೆದ ಅಂಗವಿಕಲರಿಗೆ ಉಚಿತ ಸಹಾಯ ಮತ್ತು ಸಲಕರಣೆಗಳ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲರಿಗೆ ವಿಶೇಷವಾದ ಶಕ್ತಿ ಇರುತ್ತದೆ. ಇದರಿಂದಾಗಿಯೇ ಬಹಳಷ್ಟು ಜನ ಅಂಗವಿಕಲರು ದೊಡ್ಡ ದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಸರ್ಕಾರಗಳು ಅಂಗವಿಕಲರಿಗೆ ಸ್ವಯಂ ಉದ್ಯೋಗಕ್ಕೆ ಸಾಲ, ಪ್ರೋತ್ಸಾಹಧನ, ಕೌಶಲ ತರಬೇತಿ ಸೇರಿದಂತೆ ವಿವಿಧ ಸೌಲಭ್ಯಗಳನ್ನು ನೀಡುತ್ತಿದೆ. ಅದನ್ನು ಎಲ್ಲ ಅಂಗವಿಕಲರು ಬಳಸಿಕೊಂಡು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದರು.

ADVERTISEMENT

ಸಂವಿಧಾನದಿಂದಾಗಿ ದೇಶದಲ್ಲಿ ವಿವಿಧತೆಯಲ್ಲಿ ಏಕತೆ ನೆಲೆಸಿದೆ. ಎಲ್ಲರಿಗೂ ಸಮಾನತೆ ದೊರೆತಿದೆ. ಸಮಾನತೆ ಕಲ್ಪಿಸುವ ನಿಟ್ಟಿನಲ್ಲಿ ಅಂಗವಿಕಲರಿಗೆ ತುಸು ಹೆಚ್ಚಿನ ಸೌಲಭ್ಯ ನೀಡಲಾಗಿದೆ. ಅವರೆಲ್ಲರೂ ಜೀವನ ರೂಪಿಸಿಕೊಳ್ಳಲು ನಾವೆಲ್ಲ ಸಹಕರಿಸೋಣ ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಈರಣ್ಣ ಪಂಚಾಳ ಅಧ್ಯಕ್ಷತೆ ವಹಿಸಿ ಮಾತನಾಡಿ, ಎರಡು ಕೈಗಳನ್ನು ಕಳೆದುಕೊಂಡವರು ವಾಹನ ಚಲಿಸುತ್ತಾರೆ. ಅಲ್ಲದೇ ಕೈ ಇಲ್ಲದವರು ಕಾಲಿನ ಮೂಲಕ ಬರೆಯುತ್ತಾರೆ. ಈ ನಿಟ್ಟಿನಲ್ಲಿ ಯಾವುದೂ ಅಸಾಧ್ಯವಲ್ಲ ಎನ್ನುವುದನ್ನು ತಿಳಿಸುಕೊಳ್ಳಬೇಕು.

ಮುಖ್ಯವಾಗಿ ಎಲ್ಲರೂ ಕೆಲಸ ಮಾಡುವ ಮನಸ್ಸು ಹೊಂದಬೇಕು. ಅಂದಾಗ ಮಾತ್ರ ಉತ್ತಮವಾಗಿ ಕಾರ್ಯನಿರ್ವಹಿಸಲು ಸಾಧ್ಯ. ಶ್ರಮ ಪಡುವ ಮನಸ್ಥಿತಿಯನ್ನು ಹೊಂದುವ ಮೂಲಕ ಸುಭದ್ರ ಬದುಕು ಕಟ್ಟಿಕೊಳ್ಳಲು ಸಹಕಾರಿ ಆಗುತ್ತದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಡಿವೈಎಸ್‌ಪಿ ಎಸ್‌.ಎಮ್‌.ಸಂದಿಗವಾಡ, ಅಂಗವಿಕಲರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ನಡೆಯಬೇಕಿದೆ. ಕುಟುಂಬದ ಸದಸ್ಯರು ಹಿಂಜರಿಕೆ ತೋರದೆ ಅವರನ್ನು ಪೋಷಿಸಬೇಕು. ನಮ್ಮೆಲ್ಲರಂತೆ ಅವರಿಗೂ ಕೂಡ ಬದುಕುವ ಹಕ್ಕಿದ್ದು. ಅವರನ್ನು ಸಮಾನತೆಯಿಂದ ಕಾಣುವ ವಿಶಾಲ ಮನೋಭಾವ ಬೆಳೆಸಿಕೊಳ್ಳೋಣ ಎಂದರು.

ಭಾರತ್‌ ಎಲೆಕ್ಟ್ರಾನಿಕ್ಸ್‌ ಲಿಮಿಟೆಡ್‌ನ ಮತ್ತು ಅಲಿಂಕೋ ಸಂಸ್ಥೆ ಜೂನಿಯರ್‌ ಮ್ಯಾನೇಜರ್‌ ಅಭಯ್‌ಸಿಂಗ್‌ ಪ್ರಾಸ್ತಾವಿಕ ಮಾತನಾಡಿ,ಸಿಎಸ್‌ಆರ್‌ ಕಾರ್ಯಕ್ರಮದ ಅಡಿಯಲ್ಲಿ 128 ಅಂಗವಿಕಲರ ಫಲಾನುಭವಿಗಳಿಗೆ ₹ 11.49 ಲಕ್ಷಮೌಲ್ಯದ ಅಂಗವಿಕಲರಿಗೆ ಅನುಕೂಲವಾಗುವ ಉಚಿತ ಸಹಾಯ ಮತ್ತು ಸಲಕರಣೆಗಳನ್ನು ವಿತರಿಸಲಾಗುತ್ತಿದೆ.ಈ ಬಾರಿ ರಾಜ್ಯದ ಚಿಕ್ಕಮಗಳೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅವರು ಇವುಗಳನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಳ್ಳಬೇಕು ಎಂದರು.

ಅಲ್ಲದೇ ಅಂಗವಿಕಲರಿಗೆ ವಿವಿಧ ರೀತಿಯ ಹಿಯರಿಂಗ್‌ ಯಂತ್ರ, ವ್ಹೀಲ್‌ ಚೇರ್‌, ಕೃತಕ ಕಾಲು, ವಾಕಿಂಗ್ ಸ್ಟಿಕ್‌, ಎಂಎಸ್‌ಐಡಿ ಕಿಟ್‌, ತ್ರಿಚಕ್ರ ಬೈಸಿಕಲ್‌ ಸೇರಿದಂತೆ ವಿವಿಧ ರೀತಿಯ ಸಲಕರಣೆಗಳನ್ನು ಅಂಗವಿಕಲರಿಗೆ ವಿತರಿಸಲಾಯಿತು.

ಅಂಗವಿಕಲರ ಕಲ್ಯಾಣ ಇಲಾಖೆಯ ಡಿ.ಕೆ.ಇಮಾಲಪ್ಪ, ಡಿವೈಎಸ್‌ಪಿ ಎಸ್‌.ಎಂ.ಸಂದಿಗವಾಡ, ಅಂಗವಿಕಲರ ಒಕ್ಕೂಟದ ಜಿಲ್ಲಾ ಗೌರವಾಧ್ಯಕ್ಷ ಮಲ್ಲಿಕಾರ್ಜುನ್‌ ಪೂಜಾರ, ಜಿಲ್ಲಾಧ್ಯಕ್ಷ ಮಂಜುನಾಥ ಹೊಸಕೇರಾ, ಸಮೂಹ ಸಾಮರ್ಥ್ಯ ಸಂಸ್ಥೆಯ ಬಿ.ಹಂಪಣ್ಣ ಇದ್ದರು.

ಮುದಿಯಪ್ಪ ಮೇಟಿ ನಿರೂಪಿಸಿದರು. ವೀರೇಶ ಅಳವಂಡಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.