
ಕನಕಗಿರಿ: ಹುಬ್ಬಳ್ಳಿ ತಾಲ್ಲೂಕಿನ ಇನಾಂ ವೀರಾಪುರ ಗ್ರಾಮದಲ್ಲಿ ನಡೆದ ಮರ್ಯಾದೆಗೇಡು ಹತ್ಯೆ ಹಾಗೂ ಹಲ್ಲೆಗೆ ಪ್ರಚೋದನೆ ನೀಡಿದ ವ್ಯಕ್ತಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಇಲ್ಲಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಪದಾಧಿಕಾರಿಗಳು ಮಂಗಳವಾರ ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರಿಗೆ ಮನವಿ ಸಲ್ಲಿಸಿದರು.
ಪ್ರಗತಿಪರ ಸಂಘಟನೆಗಳ ಒಕ್ಕೂಟದ ತಾಲ್ಲೂಕು ಅಧ್ಯಕ್ಷ ಪಾಮಣ್ಣ ಅರಳಿಗನೂರು,‘ಮಗಳು ಗರ್ಭಿಣಿ ಎಂಬುದು ಲೆಕ್ಕಿಸದೆ ಕೊಚ್ಚಿ ಕೊಲೆ ಮಾಡಿದ್ದು, ಮಾನವ ಕುಲ ತಲೆತಗ್ಗಿಸುವಂತಹ ವಿಷಯವಾಗಿದೆ ಎಂದರು.
ದಲಿತ ಮುಖಂಡ ಸಣ್ಣ ಹನುಮಂತಪ್ಪ ಮಾತನಾಡಿದರು.
ಪಟ್ಟಣ ಪಂಚಾಯಿತಿ ಸದಸ್ಯರಾದ ಹನುಮಂತ ಬಸರಿಗಿಡದ, ಶೇಷಪ್ಪ ಪೂಜಾರ ವಿವಿಧ ಸಂಘಟನೆಗಳ ಪದಾಧಿಕಾರಿಗಳಾದ ಲಿಂಗಪ್ಪ ಪೂಜಾರ,ನೀಲಕಂಠ ಬಡಿಗೇರ, ಸಣ್ಣದುರಗಪ್ಪ, ದುರ್ಗಪ್ಪ ಬೈಲಕ್ಕುಂಪುರ, ಉಮೇಶ ಮ್ಯಾಗಡೆ, ಸುರೇಶ ಕುರುಗೋಡು, ಹೊನ್ನೂರ ಸಾಬ, ಹನುಮಂತ ರೆಡ್ಡಿ, ವೆಂಕಟೇಶ ಪೂಜಾರ ಇತರರು ಇದ್ದರು. ತಹಶೀಲ್ದಾರ್ ವಿಶ್ವನಾಥ ಮುರುಡಿ ಅವರು ಮನವಿ ಸ್ವೀಕರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.