ಕನಕಗಿರಿ: ‘ಇಂದಿನ ಸಾಮಾಜಿಕ ಮಾಧ್ಯಮಗಳ ಹೊಡೆತಕ್ಕೆ ಗ್ರಾಮೀಣ ಸೊಗಡಿನ ಕಲೆಗಳಿಗೆ ಪೆಟ್ಟು ಬಿದ್ದಿದೆ. ಯುವ ಜನತೆ ಸಾಮಾಜಿಕ ಮಾಧ್ಯಮದಲ್ಲಿ ಮುಳಗಿ ಬದುಕಿನ ಬಹು ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ’ ಎಂದು ಕರ್ನಾಟಕ ಜಾನಪದ ಅಕಾಡಮಿ ಸದಸ್ಯ ಹಾಗೂ ಗಾಯಕ ಜೀವನಸಾಬ ವಾಲೇಕಾರ ಬಿನ್ನಾಳ ತಿಳಿಸಿದರು.
ತಾಲ್ಲೂಕಿನ ಹನುಮನಾಳ ಗ್ರಾಮದಲ್ಲಿ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದಲ್ಲಿ ಅವರು ಮಾತನಾಡಿದರು.
‘ನಮ್ಮ ಹಿರಿಕರು ನಮಗಾಗಿ ಬಿಟ್ಟು ಹೋದ ಆದರ್ಶ, ಮೌಲ್ಯ ತತ್ವ ,ಸಾಮರಸ್ಯ, ಸೌಹಾರ್ದ, ಸಹೋದರತ್ವದ ಭಾವನೆಗಳನ್ನು ಪ್ರೇರೇಪಿಸುವ ಶಕ್ತಿಯು ಗ್ರಾಮೀಣ ಜಾನಪದ ಕಲೆ ಮತ್ತು ಸಂಸ್ಕೃತಿಯಲ್ಲಿವೆ. ಇಂದಿನ ಯುವ ಜನತೆ ಹಳ್ಳಿಯ ಸೊಗಡಿನ ಅರಿವು ಹೊಂದಿ ಈ ಮೂಲಕ ಸಮಾಜದ ಶ್ರೇಷ್ಠ ನಾಗರಿಕರಾಗಿ ಬದುಕುವ ಸದಾ ಅವಕಾಶವನ್ನು ತಂದುಕೊಳ್ಳಬೇಕು’ ಎಂದು ತಿಳಿಸಿದರು.
ಇದೇ ಸಮಯದಲ್ಲಿ ಜಾನಪದ ಗೀತೆಗಳನ್ನು ಹಾಡುವ ಮೂಲಕ ರಂಜಿಸಿದರು.
ಪ್ರಭಾರ ಪ್ರಾಂಶುಪಾಲ ಅಮರೇಶ ದೇವರಾಳ, ಉಪನ್ಯಾಸಕರಾದ ರೇಖಾ, ಮಂಜುನಾಥ ಚಕ್ರಸಾಲಿ, ಎನ್‌ಎಸ್‌ಎಸ್ ಅಧಿಕಾರಿ ಶಿವಪುತ್ರಪ್ಪ ಗಳಪೂಜಿ, ಉಪನ್ಯಾಸಕ ಪಂಪಾರೆಡ್ಡಿ ಮಾದಿನಾಳ ಮಾತನಾಡಿದರು. ಪ್ರಮುಖರಾದ ಶಾಮೀದಸಾಬ, ಹನುಮೇಶ ಕನಕಾಪುರ, ರಾಮನಗೌಡ ಪಾಟೀಲ, ಶೇಖರಪ್ಪ ಕುಲಕರ್ಣಿ, ಬೀರಪ್ಪ ವಡಕಿ ಇದ್ದರು.
ಸೌಮ್ಯ ಹಾಗೂ ಮಂಜುನಾಥ ಸ್ವಾಗತಿಸಿದರು. ಲಕ್ಷ್ಮೀ, ದೇವಮ್ಮ ನಿರೂಪಿಸಿದರು. ಬಸವರಾಜ ವಂದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.