ADVERTISEMENT

ವಿಜಯನಗರ ವಿವಿ ಪ್ರಸಾರಂಗದಿಂದ ‘ಕಲಾ ವಿಜಯ’ ಪುಸ್ತಕ ಬಿಡುಗಡೆ

‘ಓದು ಜೀವನದ ಅವಿಭಾಜ್ಯ ಅಂಗವಾಗಲಿ’

​ಪ್ರಜಾವಾಣಿ ವಾರ್ತೆ
Published 14 ಜನವರಿ 2022, 6:26 IST
Last Updated 14 ಜನವರಿ 2022, 6:26 IST
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಬಳ್ಳಾರಿ ವಿಜಯನಗರ ವಿವಿ ಪ್ರಸಾರಂಗ ವತಿಯಿಂದ 'ಕಲಾ ವಿಜಯ ಪುಸ್ತಕವನ್ನು ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್ ಮರೇಗೌಡ ಬಿಡುಗಡೆ ಮಾಡಿದರು
ಕೊಪ್ಪಳದ ಗವಿಸಿದ್ಧೇಶ್ವರ ಕಾಲೇಜಿನಲ್ಲಿ ಬಳ್ಳಾರಿ ವಿಜಯನಗರ ವಿವಿ ಪ್ರಸಾರಂಗ ವತಿಯಿಂದ 'ಕಲಾ ವಿಜಯ ಪುಸ್ತಕವನ್ನು ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್ ಮರೇಗೌಡ ಬಿಡುಗಡೆ ಮಾಡಿದರು   

ಕೊಪ್ಪಳ:ಪುಸ್ತಕಗಳು ಪರೀಕ್ಷೆಯ ಓದಿಗೆ ಮಾತ್ರ ಸಹಾಯಕವಾಗಿರದೆ ಜ್ಞಾನ ತುಂಬಿ ಸುಂದರ ಜೀವನ ನಿರ್ಮಿಸುತ್ತವೆ. ಆದ್ದರಿಂದ ಎಲ್ಲ ವಿದ್ಯಾರ್ಥಿಗಳು ಹೆಚ್ಚಿನ ಸಮಯವನ್ನು ಓದುವುದಕ್ಕಾಗಿ ಮೀಸಲಿಡಬೇಕು ಎಂದು ಗವಿಸಿದ್ದೇಶ್ವರ ವಿದ್ಯಾವರ್ಧಕ ಟ್ರಸ್ಟ್ ಕಾರ್ಯದರ್ಶಿ ಡಾ.ಆರ್ ಮರೇಗೌಡ ಹೇಳಿದರು.

ನಗರದ ಶ್ರೀ ಗವಿಸಿದ್ಧೇಶ್ವರ ಪದವಿಕಾಲೇಜಿನಲ್ಲಿವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಬಳ್ಳಾರಿಪ್ರಸಾರರಂಗ ಸಹಯೋಗದಲ್ಲಿ ನಡೆದ ‘ಹೊಸ ಶಿಕ್ಷಣ ನೀತಿ-2020’ ಪಠ್ಯಕ್ರಮ ಆಧಾರಿತ ಕಲಾ ವಿಭಾಗದ ಬಿ.ಎ ಪ್ರಥಮ ಸೆಮಿಸ್ಟರಿನ ವಿದ್ಯಾರ್ಥಿಗಳಿಗಾಗಿ ವಸಂತ ಪ್ರಕಾಶನ ಪ್ರಕಟಿಸಿದ 'ಕಲಾ ವಿಜಯ' ಪುಸ್ತಕ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಡಾ.ಬಸವರಾಜ ಪೂಜಾರ ಪ್ರಧಾನ ಸಂಪಾದಕತ್ವದಲ್ಲಿ ಮತ್ತು ಡಾ.ಮಲ್ಲಿಕಾರ್ಜುನ ಎಚ್ ಮತ್ತು ಯಮನೂರಪ್ಪ ತಳವಾರ ಉಪಸಂಪಾದಕತ್ವದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಈ ಕೃತಿ ರಚನೆಯಾಗಿದೆ. ಕಲಾವಿಜಯ ತಮ್ಮ ಪಠ್ಯಕ್ಕೆ ಸಂಬಂಧಿಸಿದ ಪುಸ್ತಕವಾಗಿದೆ. ಜೊತೆಗೆ ನಾಡಿನ ಅನೇಕ ಹಿರಿಯ ವಿದ್ವಾಂಸರು, ಸಾಹಿತಿಗಳು ರಚಿಸಿರುವ ಬರಹಗಳಿಂದ ತುಂಬಿದ ಉತ್ತಮ ಜ್ಞಾನದ ದೀವಿಗೆಯಾಗಿದೆ. ತಾವೆಲ್ಲರೂ ಅದರ ಸದುಪಯೋಗ ಪಡೆದುಕೊಂಡು ಉತ್ತಮ ಜ್ಞಾನ ಮತ್ತು ಅಂಕ ಪಡೆದುಕೊಳ್ಳಬೇಕು ಎಂದರು.

ADVERTISEMENT

ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರು ಮಾತನಾಡಿ, ಪ್ರಸಾರಂಗವು ವಿಶ್ವವಿದ್ಯಾಲಯದ ಹೃದಯವಿದ್ದಂತೆ. ಓದು ಜೀವನದ ಅವಿಭಾಜ್ಯ ಅಂಗವಾಗಬೇಕು. ಇಂದಿನ ವಿದ್ಯಾಥಿಗಳ ಓದಿನ ವಿಷಯದಲ್ಲಿನ ನಿರಾಸಕ್ತಿ ಕುರಿತು ಕಳವಳ ವ್ಯಕ್ಪಡಿಸಿದ ಅವರು ಅಧ್ಯಯನವಿಲ್ಲದೇ ಯಾವುದೇ ಸಾಧನೆಯಾಗುವುದಿಲ್ಲ. ಸುಂದರ ಬದುಕಿನ ನಿರ್ಮಾಣ ಮತ್ತು ಸಾಧನೆಗೆ ಉತ್ತಮ ಓದುಗಾರಿಕೆಯೇ ಮದ್ದು ಆದ್ದರಿಂದ ತಾವೆಲ್ಲರು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದರು.

ಪ್ರಾಚಾರ್ಯ ಡಾ.ಚನ್ನಬಸವ ಅಧ್ಯಕ್ಷತೆ ವಹಿಸಿದ್ದರು.ಉಪಸಂಪಾದಕ ಡಾ.ಮಲ್ಲಿಕಾರ್ಜುನ ಎಚ್. ಪುಸ್ತಕದ ಕುರಿತು ಮಾತನಾಡಿದರು. ಸಹ ಪ್ರಾಧ್ಯಾಪಕ ಡಾ.ದಯಾನಂದ ಸಾಳುಂಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ವಸಂತ ಪ್ರಕಾಶನ ಪ್ರತಿನಿಧಿ ಬಸವರಾಜ ಸಂಕನಗೌಡರ್ ಇದ್ದರು. ಡಾ.ನಾಗರಾಜ.ಜೆ.ದಂಡೋತಿ ನಿರೂಪಿಸಿದರು. ಡಾ.ರಾಜು ಹೊಸಮನಿ ವಂದಿಸಿದರು. ವೈದೇಹಿ ಪ್ರಾರ್ಥಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.