
ಯಲಬುರ್ಗಾ: ಕೊಪ್ಪಳದ ಗವಿಸಿದ್ದೇಶ್ವರ ಜಾತ್ರಾ ಮಹೋತ್ಸವಕ್ಕೆ ಆಗಮಿಸುವ ಭಕ್ತರ ದಾಸೋಹಕ್ಕೆ ತಾಲ್ಲೂಕಿನ ಕಲ್ಲೂರು ಗ್ರಾಮಸ್ಥರು ಮೂರು ಕ್ವಿಂಟಲ್ ಶೇಂಗಾ ಹೋಳಿಗೆ ತಯಾರಿಸಿದ್ದಾರೆ.
ಜಾತ್ರೆ ಮುಕ್ತಾಯಗೊಂಡಿದ್ದರೂ ಗವಿಮಠಕ್ಕೆ ಭಕ್ತರ ಆಗಮನ ಮುಂದುವರಿದ ಹಿನ್ನೆಲೆಯಲ್ಲಿ ಕಲ್ಲೂರು ಗ್ರಾಮಸ್ಥರು ಹೋಳಿಗೆ ತಯಾರಿಸಿ ವಿತರಣೆಗೆ ಮುಂದಾಗಿದ್ದಾರೆ. ಶನಿವಾರ ಹಾಗೂ ಭಾನುವಾರ ತಯಾರಿಸಿ ಸೋಮವಾರ ಶ್ರೀಮಠಕ್ಕೆ ಅರ್ಪಿಸಲಿದ್ದಾರೆ.
ಗ್ರಾಮದ ಮಹಿಳೆಯರು, ಪುರಷರು ಸಾವಿರಾರು ಹೋಳಿಕೆ ತಯಾರಿಸಿದ್ದು ಮೆರವಣಿಗೆಯ ಮೂಲಕ ಗವಿಮಠಕ್ಕೆ ಸಮರ್ಪಿಸಲಿದ್ದಾರೆ.
ಗ್ರಾಮದ ನಿಂಗಪ್ಪ ಮೆಣಸಿನಕಾಯಿ, ಗುಂಡಪ್ಪ ಈಳಗೆರಿ, ಈಶ್ವರಯ್ಯ ಗುರುಮಠ, ಮಂಜುನಾಥ್ ಕುದುರಿಮನಿ, ರಾಜಪ್ಪ ಈಳಿಗೇರ, ಬಸಯ್ಯ ಗುರುಮಠ, ಕಲ್ಲಪ್ಪ ಬೆಳಗಡಿ, ಬಸವರಾಜ ಯಲಬುರ್ಗಿ, ಶಿವಕುಮಾರ್ ಬಂಡಿ, ರಾಜು ಬೆಣಕಲ್, ಮಲ್ಲು ಕುಂಬಾರ, ಈರಪ್ಪ ಅಗಸಿಮನಿ, ಮುದಿಯಪ್ಪ ತಳಕಲ್ಲ, ಮೂಕಪ್ಪ ಈಳಗೇರ, ಬಸವರಾಜ ಕರಮಡಿ, ಉಮೇಶ ತೊಂಡಿಹಾಳ ಹಾಗೂ ಮಹಿಳೆಯರು ಪಾಲ್ಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.