ಕನಕಗಿರಿ (ಕೊಪ್ಪಳ ಜಿಲ್ಲೆ): ಹುಲಿಹೈದರ ಗ್ರಾಮದಲ್ಲಿ ಸಿಡಿಲು ಬಡಿದು ರೈತ ಯಂಕಪ್ಪ ಜಾಡಿ (45) ಎಂಬುವರು ಮಂಗಳವಾರ ಮೃತಪಟ್ಟಿದ್ದಾನೆ. ರೈತ ಹೊಲದಲ್ಲಿದ್ದಾಗ ಈ ಘಟನೆ ನಡೆದಿದ್ದು ವ್ಯಕ್ತಿ ಜತೆಗೆ ಅಂದಾಜು ₹1 ಲಕ್ಷ ಮೌಲ್ಯದ ಎತ್ತು ಕೂಡ ಮೃತಪಟ್ಟಿದೆ.
ಘಟನೆ ನಡೆದ ಸ್ಥಳಕ್ಕೆ ತಹಶೀಲ್ದಾರ್ ವಿಶ್ವನಾಥ ಮುರುಡಿ ಭೇಟಿ ನೀಡಿ ಮೃತಪಟ್ಟ ರೈತನ ಪತ್ನಿ ಬಸಮ್ಮ ಯಂಕಪ್ಪ ಜಾಡಿ ಅವರಿಗೆ ಸರ್ಕಾರದ ಸುತ್ತೋಲೆಯ ಪ್ರಕಾರ ₹5 ಲಕ್ಷ ಪರಿಹಾರ ಧನದ ಆದೇಶ ಪ್ರತಿ ಸ್ಥಳದಲ್ಲಿಯೇ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.