ADVERTISEMENT

ಕನಕಗಿರಿ: ಹುಡೇಜಾಲಿ ಗ್ರಾಮದಲ್ಲಿ ಕರಡಿ ಪ್ರತ್ಯಕ್ಷ!

​ಪ್ರಜಾವಾಣಿ ವಾರ್ತೆ
Published 3 ಸೆಪ್ಟೆಂಬರ್ 2025, 6:36 IST
Last Updated 3 ಸೆಪ್ಟೆಂಬರ್ 2025, 6:36 IST
ಕನಕಗಿರಿ ತಾಲ್ಲೂಕಿನ ಹುಡೇಜಾಲಿ ಗ್ರಾಮದ ರಸ್ತೆಯಲ್ಲಿ ಕರಡಿ ಪ್ರತ್ಯೇಕವಾಗಿರುವುದು
ಕನಕಗಿರಿ ತಾಲ್ಲೂಕಿನ ಹುಡೇಜಾಲಿ ಗ್ರಾಮದ ರಸ್ತೆಯಲ್ಲಿ ಕರಡಿ ಪ್ರತ್ಯೇಕವಾಗಿರುವುದು   

ಕನಕಗಿರಿ: ತಾಲ್ಲೂಕಿನ ಹುಡೇಜಾಲಿ ಗ್ರಾಮದಲ್ಲಿ ಮಂಗಳವಾರ ಸಂಜೆ‌ ಕರಡಿ ಪ್ರತ್ಯಕ್ಷವಾಗಿದೆ. ಕರಡಿ ರಾಜಾರೋಷವಾಗಿ ರಸ್ತೆ ದಾಟುತ್ತಿರುವುದನ್ನು ದಾರಿಹೋಕರು ಮೊಬೈಲ್‌‌ನಲ್ಲಿ ಸೆರೆ ಹಿಡಿದಿದ್ದಾರೆ.

ಕೇಕೇ ಹಾಕಿ,‌ ಕೂಗಾಟ ನಡೆಸಿದ ಪರಿಣಾಮ ಕರಡಿ‌ ಓಡುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.

ಈ ಭಾಗದಲ್ಲಿ ಹೊಲ, ಗದ್ದೆಗಳಲ್ಲಿ ಗುಡಿಸಲು, ಮನೆ ನಿರ್ಮಾಣ ಮಾಡಿಕೊಂಡು ಜೀವನ‌ ಸಾಗಿಸುತ್ತಿರುವವರು ಬಹಳಷ್ಟು ಜನರಿದ್ದು ಘಟನೆಯಿಂದ ಆತಂಕಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.