ಪ್ರಾತಿನಿಧಿಕ ಚಿತ್ರ
ಕನಕಗಿರಿ: ಕೈಯಲ್ಲಿ ತಲ್ವಾರ್ ಹಿಡಿದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವಕನ ವಿರುದ್ಧ ದೂರು ದಾಖಲಾಗಿದೆ. ತಾಲ್ಲೂಕಿನ ವಡಕಿ ಗ್ರಾಮದ ಆನಂದ ಹನುಮಂತಪ್ಪ ಎಂಬುವವನು ತಲ್ವಾರ್ ಹಿಡಿದು ಪೋಟೋ ಕ್ಲಿಕ್ಕಿಸಿಕೊಂಡು, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ ಎಂದು ಕಾನ್‌ಸ್ಟೆಬಲ್ ಶ್ರವಣಕುಮಾರ ದೂರು ನೀಡಿದ್ದಾರೆ.
ಶಸ್ತ್ರಾಸ್ತ್ರ ಕಾಯಿದೆ-1959 ಅಧಿನಿಯಮದ ಅಡಿಯಲ್ಲಿ ಪರವಾನಗಿ ಇಲ್ಲದೆ ಶಸ್ತ್ರಾಸ್ತ್ರ ಹೊಂದುವುದು ನಿಷೇಧ. ಆದರೂ ಜ. 8ರಂದು ಆನಂದ ಅವರು ಮನೆಯ ಹತ್ತಿರ ಕಬ್ಬಿಣದ ತಲ್ವಾರ್ ಕೈಯಲ್ಲಿ ಹಿಡಿದು ಪೋಟೋ ತೆಗೆದುಕೊಂಡು, ಅದನ್ನು ಇನ್‌ಸ್ಟಾಗ್ರಾಂ ಖಾತೆಯಲ್ಲಿ ಖಾತೆಯಲ್ಲಿ ಪೋಸ್ಟ್‌ಮಾಡಿದ್ದ. ಇದು ಶಸ್ತ್ರಾಸ್ತ್ರ ಕಾಯ್ದೆ ಉಲ್ಲಂಘನೆ ಮಾಡಿರುವುದು ಕಂಡು ಬಂದಿರುತ್ತದೆ. ಕಾರಣ ಆನಂದ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲು ದೂರು ನೀಡಿದ್ದು, ಇಲ್ಲಿನ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪಿಐ ಎಂ.ಡಿ. ಫೈಜುಲ್ಲಾ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.