
ಪ್ರಜಾವಾಣಿ ವಾರ್ತೆಕುಷ್ಟಗಿ: ರಂಜಾನ್ ಮಾಸಾಚರಣೆ ನಿಮಿತ್ತ ತಾಲ್ಲೂಕಿನ ಕಂದಕೂರು ಗ್ರಾಮದಲ್ಲಿ ಶುಕ್ರವಾರ ಸರ್ವಧರ್ಮ ಇಫ್ತಾರ್ ಕೂಟ ಏರ್ಪಡಿಸಲಾಗಿತ್ತು.
ತಾಲ್ಲೂಕು ಪ್ರಾಂತ ಕೃಷಿಕೂಲಿಕಾರ ಸಂಘದ ವತಿಯಿಂದ ನಡೆದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದ್ದ ರೈತ ಮುಖಂಡ ಅಡಿವೆಪ್ಪ ಕುಷ್ಟಗಿ ಮಾತನಾಡಿ, ‘ಗ್ರಾಮ ಹಾಗೂ ತಾಲ್ಲೂಕಿನಲ್ಲಿ ಸರ್ವಧರ್ಮಗಳಲ್ಲೂ ಉತ್ತಮ ಬಾಂಧವ್ಯ ಇದೆ. ಹಬ್ಬ, ಸಾಮಾಜಿಕ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಎಲ್ಲ ಸಮುದಾಯದವರೂ ಭಾಗಿಯಾಗಿ ಭ್ರಾತೃತ್ವ ಮೆರೆಯುತ್ತ ಬಂದಿರುವುದು ಮಾದರಿಯಾಗಿದೆ’ ಎಂದು ಹೇಳಿದರು.
ಮಹ್ಮದ ಅಲಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಸಂಗಮ್ಮ ಗುಳಗೌಡರ, ರಾಮಣ್ಣ ಭಾವಿಕಟ್ಟಿ, ಹನಮಂತಪ್ಪ ಬಿಜಕಲ್, ಪ್ರಭಯ್ಯ ಹಿರೇಮಠ, ಗ್ರಾ.ಪಂ ಸದಸ್ಯ ಸಲೀಂಸಾಬ್ ಟೆಂಗುಂಟಿ, ದೊಡ್ಡಪ್ಪ ಕೈಲವಾಡಗಿ ಸೇರಿದಂತೆ ಗ್ರಾಮದ ಹಿರಿಯರು, ಸಂಘಟನೆ ಸದಸ್ಯರು ಹಾಗೂ ಮುಸ್ಲಿಂ ಸಮುದಾಯದವರು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.