ADVERTISEMENT

ಕಾರಟಗಿ: 24 ಗಂಟೆಯೊಳಗೆ ಸರಗಳ್ಳನ ಬಂಧನ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2026, 6:21 IST
Last Updated 19 ಫೆಬ್ರುವರಿ 2026, 6:21 IST
ಸರಗಳ್ಳ ಹನುಮೇಶ
ಸರಗಳ್ಳ ಹನುಮೇಶ   

ಕಾರಟಗಿ: ಶಿಕ್ಷಕಿಯೊಬ್ಬರನ್ನು ವಿಳಾಸ ಕೇಳುವ ನೆಪದಲ್ಲಿ ಅವರ ಮಾಂಗಲ್ಯ ಸರ ಕಿತ್ತುಕೊಂಡು ಪರಾರಿಯಾಗಿದ್ದ ಕಳ್ಳನನ್ನು ಕಾರಟಗಿ ಪೊಲೀಸರು 24 ಗಂಟೆಯೊಳಗೆ ಬಂಧಿಸಿದ್ದಾರೆ.

ಪಟ್ಟಣದ ಟೀಚರ್ಸ ಕಾಲೋನಿ ನಿವಾಸಿ ಗಂಗಾ ಶಿವಾನಂದ ಅಂಗಡಿ ಮಂಗಳವಾರ ಸಂಜೆ ಸಿಂಧನೂರಿನ ಖಾಸಗಿ ಶಾಲೆಯಲ್ಲಿ ವೃತ್ತಿಯನ್ನು ಮುಗಿಸಿಕೊಂಡು ಮನೆಗೆ ಹೊರಟಿದ್ದರು. ಅರಳಿ ಅಮರಗುಂಡಪ್ಪ ಲೇ‌ಔಟ್ ಹತ್ತಿರ ಯುವಕನೊಬ್ಬ ವಿಳಾಸ ಕೇಳುವ ನೆಪದಲ್ಲಿ ಶಿಕ್ಷಕಿಯ ಕೊರಳಲ್ಲಿದ್ದ ₹1.20 ಲಕ್ಷದ ಮೌಲ್ಯದ 2 ತೊಲೆಯ ಚಿನ್ನದ ಮಾಗಲ್ಯಸರ ಕಿತ್ತುಕೊಂಡು ಪರಾರಿಯಾದ್ದನು.

ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡವನ್ನು ರಚಿಸಿದ್ದರು. ವಾಸವಿ ದೇವಾಲಯದ ಬಳಿ ಬಿಟ್ಟಿದ್ದ ಬೈಕ್‌ ತಗೆದುಕೊಂಡು ಹೋಗಲು ಬುಧವಾರ ಕಳ್ಳನು ಬಂದಾಗ ಕಾದು ಕುಳಿತ್ತಿದ್ದ ಪೊಲೀಸರು ಆತನನ್ನು ಬಂಧಿಸಿದ್ದಾರೆ.

ADVERTISEMENT

ಸರಗಳ್ಳನಿಂದ 2 ತೊಲೆಯ ಮಾಗಲ್ಯಸರ, ಕೃತ್ಯಕ್ಕೆ ಬಳಸಿದ ₹50ಸಾವಿರ ಮೌಲ್ಯದ ಬೈಕ್‌, ₹5ಸಾವಿರ ಮೌಲ್ಯದ ಮೊಬೈಲ್‌ನ್ನು ವಶಕ್ಕೆ ಪಡೆದಿದ್ದಾರೆ. ಪೊಲೀಸರು, ವಿಚಾರಣೆಗೊಳಪಡಿಸಿದಾಗ ಸರಗಳ್ಳ ಕನಕಗಿರಿ ತಾಲ್ಲೂಕು ಈಚನಾಳ ಗ್ರಾಮದ ಹನುಮೇಶ ಯಮನಪ್ಪ (26) ಎಂಬುದು ತಿಳಿದು ಬಂದಿದೆ.

24 ಗಂಟೆಯೊಳಗೆ ಪ್ರಕರಣ ಭೇದಿಸಿದಕ್ಕೆ ಜಿಲ್ಲಾ ಪೊಲೀಸ್‌ ವರಿಷ್ಠ ಡಾ. ರಾಮ್‌ ಎಲ್.‌ ಅರಸಿದ್ದಿ ಹರ್ಷ ವ್ಯಕ್ತಪಡಿಸಿ, ಪ್ರಸಂಶೆ ವ್ಯಕ್ತಪಡಿಸಿ ಬಹುಮಾನ ಘೋಷಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.