ಕಾರಟಗಿ: ಶಾಸಕ ಬಸನಗೌಡ ಪಾಟೀಲ ಯತ್ನಾಳರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಖಂಡಿಸಿ, ಬಿಜೆಪಿ ಕಾರ್ಯಕರ್ತರು ಹಾಗೂ ಹಿಂದೂ ಸಮಾಜದವರು ಪಟ್ಟಣದಲ್ಲಿ ಶನಿವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಅಮ್ಮಾ ಮಹೇಶ್ವರಿ ಕಲ್ಯಾಣ ಮಂಟಪದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆಯಲ್ಲಿ ಯತ್ನಾಳ ಅವರು ಬಿಜೆಪಿಗೆ ಶಕ್ತಿ, ಎಲ್ಲರ ಉದ್ಧಾರಕ್ಕಾಗಿ ಶ್ರಮಿಸಿದ ಧೀಮಂತ ನಾಯಕ, ಮತ್ತೆ ಪಕ್ಷಕ್ಕೆ ಕರೆದುಕೊಳ್ಳಬೇಕು ಎಂದು ಘೋಷಣೆ ಹಾಕುತ್ತ ಸಾಗಿದರು. ಕನಕದಾಸ ವೃತ್ತಕ್ಕೆ ಮೆರವಣಿಗೆ ಆಗಮಿಸಿ ಸಭೆಯಾಗಿ ಮಾರ್ಪಟ್ಟಿತು.
ಪ್ರತಿಭಟನಾ ನಿರತರು ಬಿಜೆಪಿ ವರಿಷ್ಠರು ಯತ್ನಾಳ ಉಚ್ಚಾಟನೆಯನ್ನು ಮರುಪರಿಶೀಲಿಸಬೇಕು. ಮತ್ತೆ ಅವರು ಬಿಜೆಪಿಯಲ್ಲಿರಬೇಕು ಎಂದು ಆಗ್ರಹಿಸುವ ಘೋಷಣೆಗಳನ್ನು ಕೂಗಿದರು.
ಯುವ ಮುಖಂಡರಾದ ಪಂಪನಗೌಡ ಜಂತಗಲ್, ರವಿಕುಮಾರ ತಿಮ್ಮಾಪುರ, ದುರುಗೇಶ ಹೊಸ್ಕೇರಾ ಮಾತನಾಡಿ, ‘ಯತ್ನಾಳರು ಹಿಂದುತ್ವ ಪರ ನಿಲುವು ಹೊಂದಿ, ಪ್ರಾಮಾಣಿಕವಾಗಿ ಕೆಲಸ ಮಾಡಿದವರು. ಕಾಣದ ಕೈಗಳು ಅವರನ್ನು ಪಕ್ಷದಿಂದ ಹೊರ ಹಾಕಿಸಿವೆ. ಬಿಜೆಪಿ ವರಿಷ್ಠರು ಯತ್ನಾಳರ ಶಕ್ತಿ ಅರಿತು ಅವರನ್ನು ಪಕ್ಷಕ್ಕೆ ಕರೆದುಕೊಂಡು ಅವರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು’ ಎಂದು ಆಗ್ರಹಿಸಿದರು.
ಪ್ರಮುಖರಾದ ಶಿವಶರಣೇಗೌಡ ಯರಡೋಣ, ಸೋಮನಗೌಡ, ಕತ್ತಿ ಸಿದ್ದನಗೌಡ, ಶಿವಪೂಜೆ ಶರಣಪ್ಪ, ವಿರೂಪಾಕ್ಷ ತಿಮ್ಮಾಪುರ, ಭದ್ರಗೌಡ ಪನ್ನಾಪುರ, ಎತ್ತಿನಮನಿ ಬಸವರಾಜ, ಶ್ರೀಕಾಂತ ಮರಳಿ, ಮಂಜುನಾಥ, ಚನ್ನಬಸವ ಕಲ್ಗುಡಿ, ಶರಣಪ್ಪ ಅಯೋಧ್ಯ, ಚನ್ನಪ್ಪ ಕೆಂಡದ, ಬಸವರಾಜ ಹೊಸ್ಕೇರಿ, ಹನುಮೇಶ ಕಾರಟಗಿ, ಈರಣ್ಣ ಕೊಪ್ಪದ, ದೊಡ್ಡನಗೌಡ ಸಿದ್ದಾಪುರ, ರಾಘು ಭೋವಿ, ಶೆಟ್ಟರ್ ನಾಗರಾಜ, ಚಮಲಿ ಬಸವರಾಜ, ಮಂಜು ಟೋಪಿನ, ಅಮರೇಶ ಗೋವಾ, ಸುಕುಮನಿ ಕೋಲ್ಕಾರ, ಬಸವರಾಜ ನಾಯಕ, ವೀರನಗೌಡ ಯಡೋಣಿ, ಬಸವರಾಜ ಮೈಲಾಪುರ, ನಾಗನಗೌಡ ಮಾದಿನಾಳ, ಈರಣ್ಣ ಗುಂಡೂರ, ಬಸವರಾಜ ಕಕ್ಕರಗೋಳ, ಅಣ್ಣಯ್ಯ ಜಾಲವಾಡಗಿ, ಶರಣೇಗೌಡ ತಿಮ್ಮಾಪುರ, ಪಂಪಾಪತಿ ಶೀಲವಂತರ ಸಹಿತ ವಿವಿಧೆಡೆಯ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.