
ಪ್ರಜಾವಾಣಿ ವಾರ್ತೆ
ಕಾರಟಗಿ: ಉದ್ಯೋಗ ಖಾತರಿ ಯೋಜನೆಯಲ್ಲಿ ಕೆಲಸ ನೀಡಿಲ್ಲ ಎಂದು ತಾಲ್ಲೂಕಿನ ಉಳೇನೂರು ಗ್ರಾಮ ಪಂಚಾಯಿತಿ ಬಳಿ ಆಕ್ರೋಶ ಹೊರಹಾಕಿದರು.
‘ಉಳೇನೂರು ಗ್ರಾಮದಲ್ಲಿಯೇ ಪಂಚಾಯಿತಿ ಕೇಂದ್ರ ಇದ್ದರೂ ಇಲ್ಲಿಯ ಕೂಲಿಕಾರರಿಗೆ ಉದ್ಯೋಗ ನೀಡದ ಪಂಚಾಯಿತಿ ಅಧಿಕಾರಿಗಳು ಈಳಿಗನೂರು ಮತ್ತು ಜಮಾಪುರಗಳಿಗೆ ಮಾತ್ರ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ. ಉದ್ಯೋಗಕ್ಕೆ ಬೇಡಿಕೆ ಪತ್ರ ಸಲ್ಲಿಸಿದರೂ ಕೆಲಸ ನೀಡದೆ ತಾರತಮ್ಯ ನೀತಿ ಅನುಸರಿಸುತ್ತಿದ್ದೀರಿ’ ಎಂದು ಅಭಿವೃದ್ಧಿ ಅಧಿಕಾರಿಯನ್ನು ಮಹಿಳಾ ಕೂಲಿಕಾರರ ತರಾಟೆಗೆ ತೆಗೆದುಕೊಂಡರು.
ಮಹಿಳೆಯರ ಆಕ್ರೋಶಕ್ಕೆ ತಬ್ಬಿಬ್ಬಾದ ಪಂಚಾಯಿತಿ ಸಿಬ್ಬಂದಿ ಮುಂದಿನ ದಿನಗಳಲ್ಲಿ ಕೆಲಸ ನೀಡುವ ಭರವಸೆ ನೀಡಿದರು ಎಂದು ಮೂಲಗಳು ನಂತರ ತಿಳಿಸಿವೆ. ಈ ಸಂದರ್ಭದಲ್ಲಿ ಅನೇಕ ಮಹಿಳೆಯರು, ಗ್ರಾಮದ ಯುವಕರು ಹಾಜರಿದ್ದರು.