ಅಳವಂಡಿ: ಸಮೀಪದ ವದಗನಾಳ ಗ್ರಾಮದಲ್ಲಿ ನೂತನವಾಗಿ ಕರಿಯಮ್ಮದೇವಿ ದೇವಸ್ಥಾನ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆಯು ಶುಕ್ರವಾರ ನಡೆಯಿತು.
ಬೆಳಿಗ್ಗೆ ದೇವಿಗೆ ವಿಶೇಷ ಪೂಜೆ, ಹೋಮ, ಹವನ ಕಾರ್ಯಗಳು ಜರುಗಿದವು. ನಾಗರಾಜ ಭಟ್ಟ ಅವರಿಂದ ದೇವಿಯ ಪ್ರತಿಷ್ಠಾಪನೆ ನೇರವೇರಿತು. ವಿವಿಧ ಪೂಜಾ ಕಾರ್ಯಕ್ರಮ ನಡೆದವು ಹಾಗೂ ಅನ್ನ ಸಂತರ್ಪಣೆ ನಡೆಯಿತು.
ಗ್ರಾಮಸ್ಥರಾದ ಸೋಮನಾಯಕ ವಾಲ್ಮೀಕಿ, ಗುಡದನಗೌಡ, ಬಸವನಗೌಡ ಗೊಂದಿಹೊಸಳ್ಳಿ, ಕರಿಯಪ್ಪ ಅಳವಂಡಿ, ಮುರಾರೆಪ್ಪ ಶ್ಯಾನಭೋಗರ, ನಿಂಗಪ್ಪ ಅಮಾತಿ, ಹಮ್ಮಿಗೇಶ, ದೇವಣ್ಣ, ಶರಣಪ್ಪ, ಕರಿಬಸಯ್ಯ, ದೇವೇಂದ್ರಗೌಡ ಜಿರ್ಲಿ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.