ADVERTISEMENT

ಬಿಸಿಯೂಟದ ಸಿಬ್ಬಂದಿಗೆ ಪರಿಹಾರ ಘೋಷಿಸಿ: ಜಿಲ್ಲಾಧಿಕಾರಿಗೆ ಮನವಿ

ಬಿಸಿಯೂಟ ತಯಾರಕರ ಒಕ್ಕೂಟದಿಂದ ಜಿಲ್ಲಾಧಿಕಾರಿಗೆ ಮನವಿ

​ಪ್ರಜಾವಾಣಿ ವಾರ್ತೆ
Published 12 ಜೂನ್ 2021, 12:09 IST
Last Updated 12 ಜೂನ್ 2021, 12:09 IST
ಬಿಸಿಯೂಟದ ಸಿಬ್ಬಂದಿಗೆ ಕೊರೊನಾ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿ ಕೊಪ್ಪಳದಲ್ಲಿ ಶುಕ್ರವಾರ ಬಿಸಿಯೂಟ ನೌಕರರ ಒಕ್ಕೂಟದ ಸಿಬ್ಬಂದಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು
ಬಿಸಿಯೂಟದ ಸಿಬ್ಬಂದಿಗೆ ಕೊರೊನಾ ಪರಿಹಾರಧನ ನೀಡಬೇಕು ಎಂದು ಒತ್ತಾಯಿಸಿ ಕೊಪ್ಪಳದಲ್ಲಿ ಶುಕ್ರವಾರ ಬಿಸಿಯೂಟ ನೌಕರರ ಒಕ್ಕೂಟದ ಸಿಬ್ಬಂದಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು   

ಕೊಪ್ಪಳ: ಬಿಸಿಯೂಟದ ಸಿಬ್ಬಂದಿಗೂ ಕೊರೊನಾ ಪರಿಹಾರ ಮತ್ತು ಆಹಾರ ಸಾಮಗ್ರಿ ಕಿಟ್‌ ನೀಡಬೇಕು ಎಂದು ಬಿಸಿಯೂಟ ತಯಾರಕರ ಒಕ್ಕೂಟದ (ಎಐಟಿಯುಸಿ) ವತಿಯಿಂದಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ಸರ್ಕಾರಿ ಮತ್ತುಅನುದಾನಿತ ಶಾಲೆಗಳಲ್ಲಿ ಸುಮಾರು20 ವರ್ಷಗಳಿಂದ ಕೆಲಸ ನಿರ್ವಹಿಸುತ್ತಿರುವ ಬಿಸಿಯೂಟ ತಯಾರಕರನ್ನು, ಕಡಿಮೆ ಕೂಲಿಗೆ ಅಂದರೆ ದಿನವೊಂದಕ್ಕೆ ₹85 ರಂತೆ ತಿಂಗಳಿಗೆ ₹2,600 ನೀಡಿ, ಬಡ ಮಹಿಳೆಯರನ್ನು ಜೀತದಾಳುಗಳಿಗಿಂತ ಕಡೆಯಾಗಿ ದುಡಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಒಕ್ಕೂಟದ ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚೆಗೆ ಸಂಕಷ್ಟದಲ್ಲಿರುವ ಕಾರ್ಮಿಕರಿಗೆ, ದುಡಿಯುವ ವರ್ಗದ ಜನರಿಗೆ ಪ್ಯಾಕೇಜ್ ಘೋಷಣೆ ಮಾಡುವಾಗ, ಸರ್ಕಾರ ಕೊಡುವ ಬಿಡಿಗಾಸಿಗೆ, ದಿನ ಪೂರ್ತಿಯಾಗಿ ಧಗಧಗಿಸುವ ಬೆಂಕಿಯ ಒಲೆಯ ಮೇಲೆ, ಮಕ್ಕಳಿಗಾಗಿ ಬಿಸಿ–ಬಿಸಿಯಾದ ಹಾಲು, ಅಡುಗೆ ಸಿದ್ಧಪಡಿಸಿ ಉಣ ಬಡಿಸುವಅಡುಗೆಯವರಿಗೆ ಸಹಾಯ ಮಾಡದೇ ಇರುವುದು ದುರಂತ ಎಂದರು.

ADVERTISEMENT

ಆದ್ದರಿಂದ ಬಿಸಿಯೂಟ ತಯಾರಕರಿಗೆ ₹10 ಸಾವಿರ ಪ್ರೋತ್ಸಾಹಧನ, ಪಡಿತರ ಕಿಟ್, ಎರಡು ತಿಂಗಳದ ವೇತನ, ₹18 ಸಾವಿರ ಕನಿಷ್ಠ ವೇತನ, ಕೊರೊನಾಕ್ಕೆ ಬಲಿಯಾದ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.

ಒಕ್ಕೂಟದ ಜಿಲ್ಲಾ ಸಂಚಾಲಕಿ ಸುಮಂಗಲಾ ಕೊತಬಾಳ, ಗಾಳೆಪ್ಪ ಮುಂಗೋಲಿ, ಶಿವಪ್ಪ ಹಡಪದ, ಮಕ್ಬೂಲ್ ರಾಯಚೂರು, ಪುಷ್ಪಾ ಮೇಸ್ತ್ರೀ, ಬಾಳಮ್ಮ ಕಟ್ಟಿಮನಿ, ಶಿವಮ್ಮ ಶಹಪುರ, ಮರ್ದಾನಬಿ ಕಾತರಕಿ ಹಾಗೂ ಖಾಜಾಬನಿ ತಾಳಿಕೋಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.