ADVERTISEMENT

ಪಿಎಸ್‌ಐ ನೇಮಕಾತಿ ಅಕ್ರಮ: ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ನಿಂದ ಹಣ?

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2022, 11:16 IST
Last Updated 5 ಸೆಪ್ಟೆಂಬರ್ 2022, 11:16 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕುಷ್ಟಗಿ (ಕೊಪ್ಪಳ ಜಿಲ್ಲೆ): ಶಾಸಕ ಬಸವರಾಜ ದಢೇಸಗೂರು ಜೊತೆ ಮಾತನಾಡಿದ ಆಡಿಯೊದಲ್ಲಿದ್ದ ವ್ಯಕ್ತಿ ನಿವೃತ್ತ ಪೊಲೀಸ್‌ ಕಾನ್‌ಸ್ಟೆಬಲ್‌ ಆಗಿದ್ದು, ಮಗನಿಗೆ ನೌಕರಿ ಕೊಡಿಸಲು ಹಣ ನೀಡಿದ್ದರು ಎನ್ನುವ ಮಾಹಿತಿ ಗೊತ್ತಾಗಿದೆ.

ಕುಷ್ಟಗಿ ತಾಲ್ಲೂಕಿನ ಮೇಗೂರು ಗ್ರಾಮದ ಪರಸಪ್ಪ ಪೊಲೀಸ್‌ ನೌಕರಿಯಿಂದ ಸ್ವಯಂ ನಿವೃತ್ತಿ ಪಡೆದಿದ್ದರು. ಅವರ ಪತ್ನಿ ತಾಲ್ಲೂಕಿನ ಶಿರಗುಂಪಿ ಗ್ರಾಮ ಪಂಚಾಯಿತಿಗೆ ಅಧ್ಯಕ್ಷೆಯಾಗಿದ್ದರು.

‘ಬಸವರಾಜ ದಢೇಸಗೂರು ಮತ್ತು ಪರಸಪ್ಪ ಪರಸ್ಪರ ಸಂಬಂಧಿಕರು ಎಂದು ಗೊತ್ತಾಗಿದೆ. ಶಾಸಕರಿಗೆ ಹಣ ಕೊಟ್ಟಿರುವ ಬಗ್ಗೆ ಪರಸಪ್ಪ ಆರು ತಿಂಗಳ ಹಿಂದಷ್ಟೇ ನನಗೆ ಮಾಹಿತಿ ನೀಡಿದ್ದರು‘ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ದೊಡ್ಡನಗೌಡ ಪಾಟೀಲ ಹೇಳಿದರು.

ADVERTISEMENT

ಆಡಿಯೊ ವೈರಲ್‌ ಆಗುತ್ತಿದ್ದಂತೆ ಪರಸಪ್ಪ ಅವರ ಮೊಬೈಲ್‌ ಫೋನ್‌ ಬೆಳಿಗ್ಗೆಯಿಂದಲೇ ಸ್ವಿಚ್‌ ಆಫ್‌ ಆಗಿದೆ. ಮಧ್ಯಾಹ್ನದ ಬಳಿಕ ಫೋನ್‌ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.