
ಕಾರಟಗಿ: ಪಟ್ಟಣದ ಪ್ರತಿಷ್ಠಿತ ಕೇಂಬ್ರಿಡ್ಜ್ ಪಬ್ಲಿಕ್ ಶಾಲೆಯಲ್ಲಿ ಕರ್ನಾಟಕ ರಾಜ್ಯೋತ್ಸವವನ್ನುವಿವಿಧ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು.
ಆಡಳಿತ ಮಂಡಳಿಯ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿಚ್ಚಗಲ್ ಸಸಿಗೆ ನೀರುಣಿಸುವುದರೊಂದಿಗೆ ಚಾಲನೆ ನೀಡಿದರು. ಭುವನೇಶ್ವರಿ ದೇವಿಯ ಭಾವಚಿತ್ರಕ್ಕೆ ಪೂಜಿ ಸಲ್ಲಿಸಿ, ಧ್ವಜಾರೋಹಣ ಮಾಡಿದ ಬಳಿಕ ಕಾರ್ಯಕ್ರಮ ನಡೆಯಿತು.ಕನಕಗಿರಿ ವಿಧಾನಸಭಾ ಕ್ಷೇತ್ರದ ಶಾಲಾ ಸುಧಾರಣಾ ಸಮಿತಿ ಅಧ್ಯಕ್ಷ ಬಿ. ಶರಣಯ್ಯಸ್ವಾಮಿ, ವಿದ್ಯಾರ್ಥಿಗಳಲ್ಲಿ ಪುಸ್ತಕಗಳ ಓದುವ ಹವ್ಯಾಸ ಬೆಳೆಸುವ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಂದ ಗ್ರಂಥಾಲಯಕ್ಕೆ ಕೊಡಲ್ಪಟ್ಟ 650 ಪುಸ್ತಕಗಳ ‘ತೆರೆದ ಗ್ರಂಥಾಲಯ’ಕ್ಕೆ ಚಾಲನೆ ನೀಡಿದರು.
2024- 25ನೇ ಸಾಲಿನ ಎಸ್‌ಎಸ್‌ಎಲ್‌ಸಿಯಲ್ಲಿ ಕನ್ನಡ ಭಾಷಾ ವಿಷಯದಲ್ಲಿ ಶೇಕಡಾ 100ರಷ್ಟು ಅಂಕ ಗಳಿಸಿದ್ದ ಅನನ್ಯ, ವಿಶ್ವನಾಥ ಹಚೊಳ್ಳಿ, ವರ್ಷ ಮುಂಡರಗಿ, ಶರಣಮ್ಮ ಅವರ ಪಾಲಕರನ್ನು ಸನ್ಮಾನಿಸಲಾಯಿತು.
ಮಂಜುಳಾ ಬಿ. ಕಂಚಿ, ಪ್ರಾಚಾರ್ಯ ಹನುಮಂತಪ್ಪ ವಿ. ಟಿ, ಶಿಕ್ಷಕರು, ಪಾಲಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ನವನಗರದ ಆರ್‌ವಿಎಸ್ ಶಾಲೆ: ಸಮೀಪದ ಕಮ್ಮವಾರಿ ಶಿಕ್ಷಣ ಸಂಸ್ಥೆಯ ರೆಡ್ಡಿ ವೀರಣ್ಣ ಸಂಜೀವಪ್ಪ ವಸತಿ ಶಾಲೆ ಹಾಗೂ ಕಾಲೇಜಿನಲ್ಲಿ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು.
ಕನ್ನಡ ಉಪನ್ಯಾಸಕಿ ಗಂಗಮ್ಮ ಹಿರೇಮಠ, ಶಾಲೆಯ ಆಡಳಿತಾಧಿಕಾರಿ ಶ್ರೀಮನ್ ನಾರಾಯಣ, ಕನ್ನಡ ವಿಷಯದ ಶಿಕ್ಷಕ ಪಂಪನಗೌಡ ಮಾತನಾಡಿದರು.
ಶಾಲೆಯ 6 ಮತ್ತು 9ನೇ ತರಗತಿ ವಿದ್ಯಾರ್ಥಿ ಗಳಿಂದ ಕನ್ನಡ ನಾಡಿನ ಹಿರಿಮೆಯನ್ನು ಪ್ರತಿಬಿಂಬಿಸುವ ನೃತ್ಯರೂಪಕ ಕಾರ್ಯಕ್ರಮಗಳು ನಡೆದವು. ಪ್ರಾಚಾರ್ಯ ಡಾ. ಮೊಹಮ್ಮದ್ ರಫೀಕ್, ಆಡಳಿತ ಮಂಡಳಿಯ ಶ್ರೀದೇವಿ ಕೊಲ್ಲಾ, ಶಿಕ್ಷಕರಾದ ಈಶಪ್ಪ, ಸಾಜಿದ ಬೇಗಂ, ಗಂಗಮ್ಮ ಹಿರೇಮಠ, ರಾಘವೇಂದ್ರ, ರತ್ನಮ್ಮ, ಸೌಮ್ಯಾದೇವಿ, ರೋಜಾ ಮೋಹನ್, ನಂದಿತಾ ಅಮರೇಶ್ ಬಿ, ಡ್ಯಾನ್ಸ್ ಮಾಸ್ಟರ್ ಬಿ. ದೇವರಾಜ್ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.