ಕಾರಟಗಿ: ‘ಡಾ.ಸಿದ್ದಯ್ಯ ಪುರಾಣಿಕ ಹೆಸರಿನಲ್ಲಿ ಟ್ರಸ್ಟ್ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ ತಂಗಡಗಿ ಆಸಕ್ತಿಯಿಂದ ರಚನೆಯಾಗಿದ್ದು, ಜಿಲ್ಲೆಯ ಹಿರಿಯ ಸಾಹಿತಿಗಳ ಬೇಡಿಕೆ ಈಡೇರಿದೆ. ಪುರಾಣಿಕರ ತಂದೆ ಕಲ್ಲಿನಾಥ ಶಾಸ್ತ್ರಿ, ಪುರಾಣ ಪ್ರವಚನಗಳಲ್ಲಿ ವಿಶೇಷ ಆಸಕ್ತಿ ಹೊಂದಿದ್ದು, ಪ್ರವಚನ ವೃತ್ತಿಯೂ ಆಗಿತ್ತು. ತಂದೆಯ ಪ್ರವೃತ್ತಿ ಸಹಜವಾಗಿಯೇ ಪುತ್ರಗೆ ಒಲಿಯಿತು. ಶ್ರೀಮಂತ ಸಾಹಿತ್ಯಿಕ ಹಿನ್ನೆಲೆಯ ಕುಟುಂಬ ಸಿದ್ದಯ್ಯ ಪುರಾಣಿಕರದು’ ಎಂದು ಟ್ರಸ್ಟ್‌ನ ನೂತನ ಸದಸ್ಯ ಡಾ.ಹನುಮಂತಪ್ಪ ಚಂದಲಾಪುರ ಹೇಳಿದರು.
ಪಟ್ಟಣದ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕ ಭಾನುವಾರ ಟ್ರಸ್ಟ್‌ಗೆ ನೇಮಕಗೊಂಡ ಸದಸ್ಯರಿಗೆ, ನಿವೃತ್ತ ಪ್ರಾಚಾರ್ಯರನ್ನು ಸನ್ಮಾನಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಟ್ರಸ್ಟ್‌ನ ಸದಸ್ಯ ರಮೇಶ ಬನ್ನಿಕೊಪ್ಪ, ನಿವೃತ್ತ ಪ್ರಾಚಾರ್ಯ ಜಿ.ಅನಿಲ್‍ಕುಮಾರ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ, ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ಚನ್ನಬಸಪ್ಪ ವಕ್ಕಳದ, ತಾಲ್ಲೂಕಾಧ್ಯಕ್ಷ ವಿಠ್ಠಲ್ ಜೀರಗಾಳಿ, ಮುಖಂಡ ಶರಣಪ್ಪ ಕಾಯಿಗಡ್ಡಿ, ನಿವೃತ್ತ ಶಿಕ್ಷಕ ರಾಚೋಟೆಪ್ಪ ಮಾತನಾಡಿದರು.
ಕಸಾಪ ತಾಲ್ಲೂಕಾಧ್ಯಕ್ಷ ಶರಣಪ್ಪ ಕೋಟ್ಯಾಳ ಅಧ್ಯಕ್ಷತೆ ವಹಿಸಿದ್ದರು. ಡಾ.ಸಿದ್ದಯ್ಯ ಪುರಾಣಿಕ ಟ್ರಸ್ಟ್‌ಗೆ ನೂತನವಾಗಿ ನೇಮಕಗೊಂಡ ಉಪನ್ಯಾಸಕ ಹನುಮಂತಪ್ಪ ಚಂದಲಾಪುರ, ಬರಹಗಾರ ರಮೇಶ ಬನ್ನಿಕೊಪ್ಪ ಹಾಗೂ ನಿವೃತ್ತ ಪ್ರಾಚಾರ್ಯ ಜಿ. ಅನಿಲಕುಮಾರ ಅವರನ್ನು ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿದರು.
ಜಾಗೃತ ಯುವಕ ಸಂಘದ ಪ್ರಹ್ಲಾದ ಜೋಷಿ, ಮುಖ್ಯಶಿಕ್ಷಕ ರಾಘವೇಂದ್ರ ಕಂಠಿ, ಸೋಮನಾಥ ಹೆಬ್ಬಡದ್ ವಕೀಲ, ಸಮಾಜ ಕಲ್ಯಾಣ ಇಲಾಖೆಯ ಶರಣಪ್ಪ ಹುಂಡಿ, ಕಸಾಪದ ತಿಮ್ಮಣ್ಣ ನಾಯಕ, ವೆಂಕೋಬ ಪತ್ತಾರ, ಹುಲಗಪ್ಪ ದಿಡ್ಡಿಮನಿ, ನೌಕರರ ಸಂಘದ ಪದಾಧಿಕಾರಿಗಳಾದ ಶಿವಶಂಕರ್, ಶಿವರಾಜಕುಮಾರ, ಸಮುದಾಯ ಆರೋಗ್ಯ ಕೇಂದ್ರದ ವೈದ್ಯ ರಾಮಣ್ಣ, ಹನುಮಂತಪ್ಪ ಜೂರಟಗಿ, ಮುಖ್ಯಶಿಕ್ಷಕ ಶ್ಯಾಂಸುಂದರ್ ಇಂಜಿನಿ, ಜಟಿಂಗರಾಯ ದಳವಾಯಿ, ಜಂಬಣ್ಣ ತುರಾಯದ, ಅಮರೇಶ ಪಾಟೀಲ್, ಮಹಾಂತೇಶ ಗದ್ದಿ, ಶಿಕ್ಷಕ ಜಗದೀಶ ಭಜಂತ್ರಿ ಉಪಸ್ಥಿತರಿದ್ದರು.
ಕಸಾಪ ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಿಕೇನಕೊಪ್ಪ, ಸರ್ಕಾರಿ ನೌಕರರ ಸಂಘದ ಗೌರವಾಧ್ಯಕ್ಷ ಬಸವರಾಜ ರ್‍ಯಾವಳದ ನಿರೂಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.