ADVERTISEMENT

ಕನಕಗಿರಿ: ಕವಡಿಪೀರ ದೇವರ ವಿಸರ್ಜನೆ

​ಪ್ರಜಾವಾಣಿ ವಾರ್ತೆ
Published 16 ಜುಲೈ 2025, 6:11 IST
Last Updated 16 ಜುಲೈ 2025, 6:11 IST
ಕನಕಗಿರಿಯ ರಾಜಬೀದಿಯಲ್ಲಿ ಕೌಡೇಪೀರ ದೇವರಗಳ ಮೆರವಣಿಗೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು
ಕನಕಗಿರಿಯ ರಾಜಬೀದಿಯಲ್ಲಿ ಕೌಡೇಪೀರ ದೇವರಗಳ ಮೆರವಣಿಗೆ ಮಂಗಳವಾರ ಸಂಜೆ ವಿಜೃಂಭಣೆಯಿಂದ ನಡೆಯಿತು   

ಕನಕಗಿರಿ: ಮೊಹರಂ ಹಬ್ಬದ ಕೊನೆಯ ದಿನದ ನಂತರ ಇಲ್ಲಿ ಆಚರಿಸುವ ಕೌಡೇಪೀರ(ಕವಡಿಪೀರ) ದೇವರ ಜಾತ್ರೆ ಮಂಗಳವಾರ ವಿಜೃಂಭಣೆಯಿಂದ ನಡೆಯಿತು.

ಪಟ್ಟಣದ ವಿವಿಧ ಮಸೀದಿ, ಮನೆಗಳಲ್ಲಿ ಸಮಾನ ಮನಸ್ಕ ಯುವಕರು ಹಾಗೂ ಮಕ್ಕಳು ಪ್ರತಿಷ್ಠಾಪಿಸಿದ್ದ ಕವಡಿ ಪೀರ ದೇವr ಖತಲ್‌ ರಾತ್ರಿ ಸಹ ಸೋಮವಾರ ರಾತ್ರಿ ನೆರವೇರಿತು.

ಯುವಕರು ಹಲಗೆ, ಡೋಲು, ವಿವಿಧ ವಾದ್ಯಗಳನ್ನು ನುಡಿಸಿ ಸಂಭ್ರಮಿಸಿದರು. ಯುವಕರು ಪ್ರತಿ ಕವಡಿಪೀರ ದೇವರುಗಳನ್ನು ವಿನೂತನ ಬಟ್ಟೆ, ಛತ್ರಿ, ಹೂವು, ಪುದೀನಾ ಎಲೆಗಳಿಂದ ಸುಂದರವಾಗಿ ಆಲಂಕರಿಸಿ ಮಾಡಿ, ಹೆಚ್ಚಿನ ಪ್ರಮಾಣದಲ್ಲಿ ಹೂವಿನ ಹಾರ ಹಾಕಿ ಆಕರ್ಷಣೀಯಗೊಳಿಸಲಾಗಿತ್ತು. ದಾನಿಗಳಿಂದ ಹಣ ಸಂಗ್ರಹಿಸಿ ತಾವು ಪ್ರತಿಷ್ಠಾಪಿಸಲಾಗಿದ್ದ ಸ್ಥಳದಿಂದ ರಸ್ತೆವರೆಗೆ ವಿದ್ಯುತ್ ಾಲಂಕಾರಗೊಳಿಸಿದ್ದು ಗಮನ ಸೆಳೆಯಿತು. 10ನೇ ದಿನವಾದ ಮಂಗಳವಾರ ನಡೆದ ದೇವರ ವಿಸರ್ಜನೆ ಕಾರ್ಯಕ್ರಮ ಪಟ್ಟಣದಲ್ಲಿ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ಮತ್ತು ಸಂಜೆ ಗಜಲಕ್ಷ್ಮೀ ದೇವಸ್ಥಾನದ ಮುಂದೆ ಎಲ್ಲ ದೇವರುಗಳು ಪರಸ್ಪರ ಎದುರಗೊಂಡವು. ಯುವಕರು ವಿವಿಧ ನಮೂನೆಯ ಪಟಾಕಿ ಸಿಡಿಸಿ ಸಂತರ ವ್ಯಕ್ತಪಡಿಸಿದರು.

ADVERTISEMENT

ದೇವರು ಎದುರುಗೊಳ್ಳುವ ಸಮಯದಲ್ಲಿ ನೆರೆದ ಜನರು ಮಂಡಾಳು, ಹೂವು ಎಸೆದು ಧನ್ಯತೆ ಮರೆದರು. ಹರಕೆ ಹೊತ್ತ ಮನೆಗೆ ಕವಡಿಪೀರ ದೇವರು ಮನೆಗೆ ಬಂದಾಗ ಸಕ್ಕರೆ ಇತರೆ ನೈವೇದ್ಯ ಸಲ್ಲಿಸಿದರು. ಸಂಜೆ ಕವಡಿ ಪೀರ ದೇವರ ವಿಸರ್ಜನೆ ನಡೆಯಿತು.

‘ಇವತ್ತೊಂದು ರಾತ್ರಿ, ಕವಡಿಪೀರನ ಜಾತ್ರೆ’ ಎನ್ನುತ್ತ ಯುವಕರು ದೇವರನ್ನು ಪ್ರವಾಸಿ ಮಂದಿರದ ರಸ್ತೆಯಲ್ಲಿರುವ ಹಳ್ಳದ ಪರಿಸರದಲ್ಲಿ ವಿಸರ್ಜನೆ ಮಾಡಿದರು. ವಿವಿಧ ಮಸೀದಿ, ರಾಜಬೀದಿಯಲ್ಲಿ ಅಪಾರ ಜನಸ್ತೋಮ ಸೇರಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.