ADVERTISEMENT

ಕೊಪ್ಪಳ | ದಾಖಲೆಯಿಲ್ಲದೇ ಹಣ ಸಾಗಾಟ: ₹ 3.97 ಲಕ್ಷ ಜಪ್ತಿ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2023, 16:09 IST
Last Updated 23 ಮಾರ್ಚ್ 2023, 16:09 IST
   

ಕೊಪ್ಪಳ: ತಾಲ್ಲೂಕಿನ ಮುನಿರಾಬಾದ್ ಚೆಕ್ ಪೋಸ್ಟ್ ಬಳಿ ಗುರುವಾರ ದಾಖಲೆಗಳಲ್ಲದೇ ಸಾಗಿಸುತ್ತಿದ್ದ ₹3.97 ಲಕ್ಷವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.

ಬೆಂಗಳೂರಿನಿಂದ ಹೊಸಪೇಟೆ ಮಾರ್ಗವಾಗಿ ಹುಬ್ಬಳ್ಳಿಗೆ ಕಾರು ಹೊರಟಿತ್ತು. ಸೂಕ್ತ ದಾಖಲೆಗಳಿಲ್ಲದ ಕಾರಣ ಹಣದ ಜೊತೆಗೆ ₹ 61,300 ಮೌಲ್ಯದ ಚೂಡಿದಾರ, ಫ್ರಾಕ್ಸ್, ಲೆಹೆಂಗಾಗಳನ್ನು ಚಂದನಸಿಂಗ್ ಎಂಬುವವರಿಂದ ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT