ADVERTISEMENT

ಶಾಸಕರಿಗೆ ಜನ ತಕ್ಕ ಪಾಠ ಕಲಿಸುವರು: ಮಾರುತಿ ಗಾವರಾಳ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2025, 4:22 IST
Last Updated 25 ಸೆಪ್ಟೆಂಬರ್ 2025, 4:22 IST
ಕುಕನೂರಿನಲ್ಲಿ ಬಿಜೆಪಿ ಮಂಡಲದ ವತಿಯಿಂದ ರಸ್ತೆ ದುರಸ್ತಿ ಮಾಡುವಂತೆ ಪ್ರತಿಭಟನೆ ಮಾಡಲಾಯಿತು
ಕುಕನೂರಿನಲ್ಲಿ ಬಿಜೆಪಿ ಮಂಡಲದ ವತಿಯಿಂದ ರಸ್ತೆ ದುರಸ್ತಿ ಮಾಡುವಂತೆ ಪ್ರತಿಭಟನೆ ಮಾಡಲಾಯಿತು   

ಕುಕನೂರು: ‘ಕ್ಷೇತ್ರದ ಶಾಸಕ ಬಸವರಾಜ ರಾಯರಡ್ಡಿ ಅವರಿಗೆ ತಾಲ್ಲೂಕಿನ ಜನತೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸಲಿದ್ದಾರೆ’ ಎಂದು ಬಿಜೆಪಿ ತಾಲ್ಲೂಕು ಮಂಡಲದ ಅಧ್ಯಕ್ಷ ಮಾರುತಿ ಗಾವರಾಳ ಹೇಳಿದರು.

ಪಟ್ಟಣದ ನವೋದಯ ಶಾಲೆಯ ಮುಂಭಾಗದಲ್ಲಿ ಬಿಜೆಪಿಯಿಂದ ರಸ್ತೆ ದುರಸ್ತಿ ಕಾರ್ಯ ಮಾಡುವಂತೆ ಆಗ್ರಹಿಸಿ ನಡೆಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಪಂಚ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟು ಜನರನ್ನು ಯಾಮಾರಿಸಿ ಅಧಿಕಾರಕ್ಕೆ ಬಂದ ರಾಯರಡ್ಡಿಗೆ ಅಭಿವೃದ್ಧಿ ಮರೆತುಹೋಗಿದೆ. ಕೇವಲ ಸುಳ್ಳು ಭಾಷಣಗಳಿಂದ ತಾಲ್ಲೂಕನ್ನು ಸಿಂಗಾಪುರ, ಅಮೆರಿಕ ಮಾಡುತ್ತೇನೆ ಎಂದು ಜಂಬ ಕೊಚ್ಚಿಕೊಳ್ಳುವ ಶಾಸಕರು ಮೊದಲು ಮಾಜಿ ಸಚಿವ ಹಾಲಪ್ಪ ಆಚಾರ್ ಅವರು ಕೈಗೊಂಡ ಕಾಮಗಾರಿಗಳಿಗೆ ಸುಣ್ಣ ಬಣ್ಣ ಬಳಿಯುವ ಕೆಲಸ ಮಾಡಲಿ’ ಎಂದರು.

ADVERTISEMENT

ಜೆಡಿಎಸ್ ಜಿಲ್ಲಾ ವಕ್ತಾರ ಮಲ್ಲನಗೌಡ ಕೋನನಗೌಡ ಮಾತನಾಡಿದರು.

ಅನಿಲ್ ಆಚಾರ್, ನಾಗರಾಜ್ ವೆಂಕಟಾಪುರ, ಶಿವಕುಮಾರ ನಾಗಲಾಪುರಮಠ, ಬಸವರಾಜ ಹಾಳಕೆರಿ, ಶಿವರಾಜಗೌಡ, ಸಿದ್ದು ವಾಲ್ಮೀಕಿ, ಮಹಾಂತೇಶ್ ಹೂಗಾರ ಇದ್ದರು .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.