ಕೊಪ್ಪಳ: ದಿನಪೂರ್ತಿ ಕಾದರೂ ಯೂರಿಯಾ ರಸಗೊಬ್ಬರ ಸಿಗದ ಕಾರಣಕ್ಕೆ ತಾಲ್ಲೂಕಿನ ಕುಣಿಕೇರಿ ತಾಂಡಾದ ರೈತ ಚಂದ್ರಪ್ಪ ಬಡಿಗಿ ಶನಿವಾರ ಮಣ್ಣು ತಿಂದು ಆಕ್ರೋಶ ಹೊರಹಾಕಿದ್ದಾರೆ.
ಇಲ್ಲಿನ ತಾಲ್ಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂಘದ ಆವರಣದಲ್ಲಿ ಚಂದ್ರಪ್ಪ ಅವರು, ‘ಯೂರಿಯಾ ರಸಗೊಬ್ಬರ ಸಿಗದಿದ್ದರೆ ಮಣ್ಣು ತಿನ್ನಬೇಕೇನು, ಬಡವರು ಏನು ಮಾಡಬೇಕು? ಚೆನ್ನಾಗಿ ಮಳೆಯಾಗಿದೆ. ಗೊಬ್ಬರವಿಲ್ಲವೆಂದರೆ ಹೇಗೆ?’ ಎಂದು ಪ್ರಶ್ನಿಸಿ, ಮಣ್ಣು ತಿಂದರು.
‘ಬೆಳಗಿನ ಜಾವ ನಾಲ್ಕು ಗಂಟೆಗೆ ಬಂದು ಕಾದರೂ ಗೊಬ್ಬರ ಸಿಕ್ಕಿಲ್ಲ. ಮೆಕ್ಕಜೋಳ, ತೊಗರಿ ಬೆಳೆ ಹಾಳಾಗುತ್ತಿವೆ. ಮಹತ್ವದ ಸಮಯದಲ್ಲಿಯೂ ಯೂರಿಯಾ ಸಿಗದಿದ್ದರೆ ಹೇಗೆ’ ಎಂದು ಅಸಮಾಧಾನ ಹೊರಹಾಕಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.