ADVERTISEMENT

ಕೊಪ್ಪಳ: ಲಾರಿ ಹಾಯ್ದು 15 ಕುರಿಗಳ ಸಾವು

​ಪ್ರಜಾವಾಣಿ ವಾರ್ತೆ
Published 31 ಜನವರಿ 2026, 7:26 IST
Last Updated 31 ಜನವರಿ 2026, 7:26 IST
ಮುನಿರಾಬಾದ್ ಸಮೀಪ ಶಹಾಪುರ ಗ್ರಾಮದ ಬಳಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿಗಳ ಮೇಲೆ ಲಾರಿ ಹರಿದ ಪರಿಣಾಮ 15 ಕುರಿಗಳು ಮೃತಪಟ್ಟಿವೆ
ಮುನಿರಾಬಾದ್ ಸಮೀಪ ಶಹಾಪುರ ಗ್ರಾಮದ ಬಳಿ ಶುಕ್ರವಾರ ರಾಷ್ಟ್ರೀಯ ಹೆದ್ದಾರಿ ದಾಟುತ್ತಿದ್ದ ಕುರಿಗಳ ಮೇಲೆ ಲಾರಿ ಹರಿದ ಪರಿಣಾಮ 15 ಕುರಿಗಳು ಮೃತಪಟ್ಟಿವೆ   

ಮುನಿರಾಬಾದ್: ಇಲ್ಲಿನ ಸೊಲ್ಲಾಪುರ-ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯ ಶಹಾಪುರ ಗ್ರಾಮದ ಬಳಿ ಶುಕ್ರವಾರ ಲಾರಿಯೊಂದು ಹಾಯ್ದು ಪರಿಣಾಮ ಸುಮಾರು 15 ಕುರಿಗಳು ಸ್ಥಳದಲ್ಲೇ ಸಾವನ್ನಪ್ಪಿವೆ. ಇನ್ನೂ ಆರೇಳು ಕುರಿಗಳಿಗೆ ಗಾಯಗೊಂಡಿವೆ.

ಶಹಾಪುರ ಗ್ರಾಮದ ಬಳಿ ಹೆದ್ದಾರಿ ದಾಟುತ್ತಿದ್ದ ಸುಮಾರು ನೂರಕ್ಕೂ ಹೆಚ್ಚು ಕುರಿಗಳ ಹಿಂಡಿನ ಮೇಲೆ ವಿಜಯಪುರದಿಂದ ಹೊಸಪೇಟೆಗೆ ವೇಗವಾಗಿ ತೆರಳುತ್ತಿದ್ದ ಲಾರಿ ಚಾಲಕನೆ ನಿಯಂತ್ರಣಕ್ಕೆ ಸಿಗದೆ ಕುರಿಗಳ ಮೇಲೆ ಹಾಯ್ದಿದೆ ಎಂದು ಪ್ರತ್ಯೇಕದರ್ಶಿಗಳು ತಿಳಿಸಿದರು.

ಪಶು ವೈದ್ಯಾಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಬಂದು ಮಹಜರು ನಡೆಸಿದರು.

ADVERTISEMENT

ಶಹಾಪುರ ಗ್ರಾಮದ ರಾಮಣ್ಣ ಕೋರಿ ಮತ್ತು ಬೀರಪ್ಪ ಬೂದಿಹಾಳ ಅವರ ಕುರಿಗಳು ಎಂದು ತಿಳಿದು ಬಂದಿದೆ. ಲಾರಿಯನ್ನು ವಶಕ್ಕೆ ಪಡೆದ ಮುನಿರಾಬಾದ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.