ADVERTISEMENT

ಕೊಪ್ಪಳ: ನಿವೇಶನ, ಮನೆ ಒದಗಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 28 ಜನವರಿ 2026, 6:49 IST
Last Updated 28 ಜನವರಿ 2026, 6:49 IST
ಕೊಪ್ಪಳದಲ್ಲಿ ಮಂಗಳವಾರ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಅವರಿಗೆ ಮನವಿ ಸಲ್ಲಿಸಲಾಯಿತು
ಕೊಪ್ಪಳದಲ್ಲಿ ಮಂಗಳವಾರ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘದ ವತಿಯಿಂದ ಪ್ರತಿಭಟನೆ ನಡೆಸಿ ನಗರಸಭೆ ಪೌರಾಯುಕ್ತ ವೆಂಕಟೇಶ್ ನಾಗನೂರು ಅವರಿಗೆ ಮನವಿ ಸಲ್ಲಿಸಲಾಯಿತು   

ಕೊಪ್ಪಳ: ಪೇಂಟರ್ ಕಾರ್ಮಿಕರಿಗೆ ನಿವೇಶನ ಮತ್ತು ಮನೆಗಳ ಒದಗಿಸಲು ಆಗ್ರಹಿಸಿ ಜಿಲ್ಲಾ ಪೇಂಟರ್ ಕಾರ್ಮಿಕರ ಸಂಘ (ಐ.ಎಫ್.ಟಿ.ಯು. ಸೇರ್ಪಡೆ) ನೇತೃತ್ವದಲ್ಲಿ ಮಂಗಳವಾರ ಅಶೋಕ ವೃತ್ತದಿಂದ ನಗರಸಭೆ ತನಕ ಪ್ರತಿಭಟನಾ ಮೆರವಣಿಗೆ ನಡೆಯಿತು.

ಬಳಿಕ ನಗರಸಭೆ ಪೌರಾಯುಕ್ತ ವೆಂಕಟೇಶ್‌ ನಾಗನೂರು ಅವರಿಗೆ ಮನವಿ ಸಲ್ಲಿಸಿ ‘ನಗರದಲ್ಲಿ ಪೇಂಟರ್ ಕಾರ್ಮಿಕರ ಸಂಘದ ನೇತೃತ್ವದಲ್ಲಿ ಕಾರ್ಮಿಕರು ಸಂಘಟಿತರಾಗಿ 14 ವರ್ಷಗಳಿಂದ ನಿರಂತರವಾಗಿ ಮನವಿ ಮಾಡಿದರೂ ಬೇಡಿಕೆಗಳು ಈಡೇರಿಲ್ಲ. ವಸತಿ ಸೌಲಭ್ಯ ಒದಗಿಸದ ಕಾರಣ ಪ್ರತಿಭಟನೆ ಮಾಡಬೇಕಾಗಿದೆ’ ಎಂದರು.

ಸಂಘದ ಅಧ್ಯಕ್ಷ ರಜಾಕ್ ಪೇಂಟರ್‌, ಪ್ರಧಾನ ಕಾರ್ಯದರ್ಶಿ ಬಸವರಾಜ ಮಂಡ್ಯ, ಖಜಾಂಚಿ ಆಸೀಫ್ ಕಿಲ್ಲೇದಾರ್‌,  ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟ (ಐ.ಎಫ್.ಟಿ.ಯು) ಜಿಲ್ಲಾ ಮುಖ್ಯ ಸಂಚಾಲಕ ಬಸವರಾಜ ಶೀಲವಂತರ್. ಜಿಲ್ಲಾ ಸಂಚಾಲಕ ಎಸ್.ಎ.ಗಫಾರ್, ತುಕಾರಾಮ್ ಪಾತ್ರೋಟಿ, ಗಾಳೆಪ್ಪ ಮುಂಗೋಲಿ, ಸೈಯ್ಯದ್ ನೂರುಲ್ಲಾ ಖಾದ್ರಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.