ADVERTISEMENT

ಕೊಪ್ಪಳ: ಉದ್ಯಾನ ನಿರ್ಮಾಣಕ್ಕೆ ಭೂಮಿಪೂಜೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2025, 5:38 IST
Last Updated 14 ಅಕ್ಟೋಬರ್ 2025, 5:38 IST
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಎಂಎಸ್‌ಪಿಎಲ್‌ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲದಲ್ಲಿ ಉದ್ಯಾನ ನಿರ್ಮಾಣಕ್ಕೆ ಚಾಲನೆ ಲಭಿಸಿತು
ಕೊಪ್ಪಳ ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಎಂಎಸ್‌ಪಿಎಲ್‌ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿ ಸಹಯೋಗದಲದಲ್ಲಿ ಉದ್ಯಾನ ನಿರ್ಮಾಣಕ್ಕೆ ಚಾಲನೆ ಲಭಿಸಿತು   

ಕೊಪ್ಪಳ: ತಾಲ್ಲೂಕಿನ ಹಾಲವರ್ತಿ ಗ್ರಾಮದಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ಹಾಗೂ ಎಂಎಸ್‌ಪಿಎಲ್‌ ಕಂಪನಿಯ ಸಿಎಸ್‌ಆರ್‌ ಚಟುವಟಿಕೆಯ ಭಾಗವಾಗಿ ಉದ್ಯಾನ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮ ನೆರವೇರಿತು.

ಎಂಎಸ್‌ಪಿಎಲ್‌ನ ಸಿಎಸ್ಆರ್ ವಿಭಾಗದ ಉಪಾಧ್ಯಕ್ಷ ಎಚ್‌.ಕೆ. ರಮೇಶ್ ಮಾತನಾಡಿ ‘ವೇಗದ ಬದುಕಿನಲ್ಲಿ ಪ್ರಕೃತಿಯೊಡನೆ ನಮ್ಮ ನಂಟು ನಿಧಾನವಾಗಿ ಕಡಿಮೆಯಾಗುತ್ತಿದೆ. ಆದ್ದರಿಂದ ಪರಿಸರದ ಸಂರಕ್ಷಣೆ ಕೇವಲ ಕರ್ತವ್ಯವಲ್ಲ, ಅದು ಮುಂದಿನ ಪೀಳಿಗೆಗಾಗಿ ನಮ್ಮ ನೈತಿಕ ಜವಾಬ್ದಾರಿಯಾಗಿದೆ’ ಎಂದರು.

‘ಗ್ರಾಮಸ್ಥರ ಅನೇಕ ವರ್ಷಗಳ ಆಸೆಯಂತೆ ಹಾಲವರ್ತಿಯಲ್ಲಿ ಸುಸಜ್ಜಿತ ಉದ್ಯಾನ ನಿರ್ಮಾಣಕ್ಕಾಗಿ ನಮ್ಮ ಸಂಸ್ಥೆ ನೆರವಾಗಿದೆ. ಹಿರಿಯರು ಉದ್ಯಾನದಲ್ಲಿ ಬೆಳಗಿನ ನಡಿಗೆ ಮೂಲಕ ಆರೋಗ್ಯ ಕಾಪಾಡಿಕೊಳ್ಳಬಹುದು, ಮಕ್ಕಳು ಆಟದ ಮೈದಾನದಲ್ಲಿ ಸಂತೋಷದಿಂದ ಸಮಯ ಕಳೆಯಬಹುದು, ಯುವಕರು ಕ್ರೀಡೆ ಮತ್ತು ವ್ಯಾಯಾಮದ ಮೂಲಕ ಶಕ್ತಿಯುತ ಜೀವನಕ್ಕೆ ಪ್ರೇರಣೆಯಾಗಬಹುದು’ ಎಂದು ಹೇಳಿದರು.

ADVERTISEMENT

ಕಂಪನಿಯ ಘಟಕದ ಮುಖ್ಯಸ್ಥ ವೀರೇಶ್, ಎಜಿಎಂ ಪ್ರವೀಣ್‌ ಮನು, ರವಿ ಬಿಸಗುಪ್ಪಿ, ವಿಠ್ಠಲ ಸಲಗರ, ಎಚ್ ಆರ್, ಲೋಹಿತ್, ಆನಂದ್ ಕಿನ್ನಾಳ, ಮಹೇಂದ್ರ ಹಾಲವರ್ತಿ, ಸಿಂದಗಪ್ಪ ಹೊಸಳ್ಳಿ, ಮುದಿಯಪ್ಪ ಆದೋನಿ, ಗುರುಸಿದ್ದಪ್ಪ, ದ್ಯಾಮಣ್ಣ ಹೊಸಳ್ಳಿ, ಹನುಮಂತ ಗೊರವರ, ಗವಿಸಿದ್ದಾರೆಡ್ಡಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.