ADVERTISEMENT

ಕೊಪ್ಪಳ: ಟ್ರ್ಯಾಕ್ಟರ್‌ ಡಿಕ್ಕಿ; ಉರುಳಿ ಬಿದ್ದ ಕಬ್ಬಿಣದ ಕಂಬ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2026, 8:07 IST
Last Updated 14 ಫೆಬ್ರುವರಿ 2026, 8:07 IST
ಕೊಪ್ಪಳದ ಅಶೋಕ ವೃತ್ತದ ಬಳಿ ಉರುಳಿ ಬಿದ್ದ ಕಂಬ
ಕೊಪ್ಪಳದ ಅಶೋಕ ವೃತ್ತದ ಬಳಿ ಉರುಳಿ ಬಿದ್ದ ಕಂಬ   

ಕೊಪ್ಪಳ: ಬಿಸಿಲಿನಿಂದ ರಕ್ಷಣೆ ಪಡೆಯಲು ನಗರದಲ್ಲಿ ಸಿಗ್ನಲ್‌ ಬಳಿ ಹಾಕಲಾಗಿರುವ ನೆರಳಿನ ಕವಚದ ಕಬ್ಬಿಣದ ಕಂಬಕ್ಕೆ ಶುಕ್ರವಾರ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದ ಪರಿಣಾಮ ಕಂಬ ದಿಢೀರನೆ ನೆಲಕ್ಕುರುಳಿತು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿ ಮುಂಭಾಗದ ರಸ್ತೆಯಲ್ಲಿ ವೇಗವಾಗಿ ಬಂದ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದಿದ್ದರಿಂದ ಘಟನೆ ನಡೆದಿದ್ದು, ಟ್ರ್ಯಾಕ್ಟರ್‌ ಚಾಲಕ ವೇಗವಾಗಿ ವಾಹನ ಓಡಿಸಿಕೊಂಡು ಹೋಯಿತು. ಇಲ್ಲವಾದರೆ ಕಂಬ ಟ್ರ್ಯಾಕ್ಟರ್‌ ಚಾಲಕ ಹಾಗೂ ಹಿಂಭಾಗದಲ್ಲಿದ್ದ ದ್ವಿಚಕ್ರ ವಾಹನ ಚಾಲಕನ ಮೇಲೆ ಕಂಬ ಅಪ್ಪಳಿಸುತ್ತಿತ್ತು.

ಕಳೆದ ಬೇಸಿಗೆ ಕಾಲದ ಸಮಯದಲ್ಲಿ ವಿವಿಧ ಸಂಘಟನೆಗಳ ಮುಖಂಡರು ಬೇಡಿಕೆ ಸಲ್ಲಿಸಿದ್ದರಿಂದ ನಗರಸಭೆ ವತಿಯಿಂದ  ಅಶೋಕ ವೃತ್ತದಲ್ಲಿ ಮೂರು ಕಡೆ ವಾಹನಗಳ ಸವಾರರಿಗೆ ನೆರಳಿನ ವ್ಯವಸ್ಥೆ ಮಾಡಿದ್ದಾರೆ. ಕಂಬಗಳನ್ನು ಹಾಕಿ ಅದರ ಮೇಲೆ ಹಸಿರು ಹೊದಿಕೆ ಹಾಕಿದ್ದಾರೆ. ಬಹುತೇಕ ಎಲ್ಲ ಹೊದಿಕೆಗಳು ಹರಿದು ಹೋಗಿದ್ದು, ವಾಹನಗಳ ಚಾಲಕರು ಕಂಬಗಳಿಗೆ ಡಿಕ್ಕಿ ಹೊಡೆದರೆ ಬೀಳುವ ಅಪಾಯ ಸವಾರರನ್ನು ಕಾಡುತ್ತಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.