ADVERTISEMENT

‘ಸಹಕಾರ ಸಂಘದ ಬೆಳವಣಿಗೆಗೆ ಗ್ರಾಹಕರು, ಠೇವಣಿದಾರರು ಆಧಾರ ಸ್ತಂಭಗಳು’

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2024, 15:02 IST
Last Updated 26 ಸೆಪ್ಟೆಂಬರ್ 2024, 15:02 IST
ಕಾರಟಗಿಯ ಬಸವ ಭಾನು ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಬಸವರಾಜ ಕುಡ್ಲೂರು ಮಾತನಾಡಿದರು
ಕಾರಟಗಿಯ ಬಸವ ಭಾನು ಸಹಕಾರಿಯ ವಾರ್ಷಿಕ ಮಹಾಸಭೆಯಲ್ಲಿ ಅಧ್ಯಕ್ಷ ಬಸವರಾಜ ಕುಡ್ಲೂರು ಮಾತನಾಡಿದರು   

ಕಾರಟಗಿ: ‘ಗ್ರಾಹಕರ ಸಹಕಾರ, ಪ್ರೋತ್ಸಾಹದಿಂದ ನಮ್ಮ ಸಹಕಾರ ಸಂಘವು ಉತ್ತಮ ಸಾಧನೆ ಮಾಡಿದೆ. ₹ 6 ಲಕ್ಷ ಬಂಡವಾಳದೊಂದಿಗೆ ಆರಂಭಗೊಂಡ ಸಹಕಾರಿ ಈಗ ₹ 1.83 ಕೋಟಿ ಬಂಡವಾಳ ಹೊಂದಿದೆ. ಈ ಸಾಧನೆಗೆ ಸಹಕಾರ ಸಂಘದ ಠೇವಣಿದಾರು ಹಾಗೂ ಗ್ರಾಹಕರ ಸಹಕಾರವೇ ಕಾರಣ. ಗ್ರಾಹಕರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿಸಿ, ಇತರರಿಗೆ ಸಹಕಾರ ನೀಡುತ್ತಿದ್ದಾರೆ. ಗ್ರಾಹಕರು ಮತ್ತು ಠೇವಣಿದಾರರು ಸಂಘದ ಆಧಾರ ಸ್ತಂಭಗಳಾಗಿದ್ದಾರೆ’ ಎಂದು ಸಹಕಾರಿ ಸಂಘದ ಅಧ್ಯಕ್ಷ ಬಸವರಾಜ ಕೂಡ್ಲೂರು ಹೇಳಿದರು.

ಪಟ್ಟಣದಲ್ಲಿ ಬುಧವಾರ ನಡೆದ ಬಸವ ಭಾನು ಪತ್ತಿನ ಸೌಹಾರ್ದ ಸಹಕಾರಿ ಸಂಘದ 7ನೇ ಸರ್ವ ಸದಸ್ಯರ ಸಾಮಾನ್ಯ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಸಹಕಾರ ಸಂಘವು ಸಮಾಜಮುಖಿಯಾಗಿಯೂ ಅನೇಕ ಕಾರ್ಯಗಳನ್ನು ಮಾಡಿದೆ. ಸಹಕಾರ, ಪ್ರೋತ್ಸಾಹ ದೊರೆತರೆ ಮತ್ತಷ್ಟು ಹೆಚ್ಚು ಕೆಲಸ ಮಾಡುವ ಚಿಂತನೆಯಿದೆ’ ಎಂದರು.

ಸಂಘದ ಸದಸ್ಯರಾದ ಗುಂಡಪ್ಪ ಕುಳಗಿ, ವೀರೇಶಯ್ಯಸ್ವಾಮಿ ಯರಡೋಣ, ಸಹಕಾರಿಯ ಉಪಾಧ್ಯಕ್ಷ ಬಸವರಾಜ ಕುಳಗಿ, ನಿರ್ದೇಶಕರಾದ ಮೌನೇಶ ಕೊಳ್ಳಿ, ಶೇಖರಗೌಡ ಪೋಲಿಸ್ ಪಾಟೀಲ, ಶಿವಕುಮಾರ ಕುಳಗಿ, ಮುದುಕಪ್ಪ ನಾಯಕ, ರಾಜಶೇಖರ ಕುಡ್ಲೂರ ಸಹಿತ ಅನೇಕ ಗ್ರಾಹಕರು ಉಪಸ್ಥಿತರಿದ್ದರು.

ADVERTISEMENT

ಸಹಕಾರ ಸಂಘದ ವಾರ್ಷಿಕ ವರದಿಯನ್ನು ವ್ಯವಸ್ಥಾಪಕ ಸಂಗಪ್ಪ ಕುಡ್ಲೂರ ಮಂಡಿಸಿ ಮಾತನಾಡಿದರು. ಶಿಲ್ಪಾ ಕುಡ್ಲೂರ, ಸಹ ವ್ಯವಸ್ಥಾಪಕಿ ಸ್ವಪ್ನಾ ಗುಂಜಳ್ಳಿ ಕಾರ್ಯಕ್ರಮ ನಿರ್ವಹಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.