ADVERTISEMENT

ಕುಕನೂರು: ಅಳಿಯ ಚನ್ನಬಸವೇಶ್ವರ ಉಚ್ಚಾಯ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2025, 7:25 IST
Last Updated 20 ಆಗಸ್ಟ್ 2025, 7:25 IST
ಕುಕನೂರು ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದಲ್ಲಿ ಅಳಿಯ ಚನ್ನಬಸವೇಶ್ವರ ಸ್ವಾಮಿಯ ಉಚ್ಚಾಯ ಮಂಗಳವಾರ ಅದ್ದೂರಿಯಾಗಿ ಜರುಗಿತು
ಕುಕನೂರು ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದಲ್ಲಿ ಅಳಿಯ ಚನ್ನಬಸವೇಶ್ವರ ಸ್ವಾಮಿಯ ಉಚ್ಚಾಯ ಮಂಗಳವಾರ ಅದ್ದೂರಿಯಾಗಿ ಜರುಗಿತು   

ಕುಕನೂರು: ತಾಲ್ಲೂಕಿನ ಕಕ್ಕಿಹಳ್ಳಿ ಗ್ರಾಮದಲ್ಲಿ ಅಳಿಯ ಚನ್ನಬಸವೇಶ್ವರ ಸ್ವಾಮಿಯ ಉಚ್ಚಾಯ ಮಂಗಳವಾರ ಅದ್ದೂರಿಯಾಗಿ ಜರುಗಿತು.

ಯಲಬುರ್ಗಾ ಶ್ರೀಧರ ಮುರಡಿ ಹಿರೇಮಠದ ಬಸವಲಿಂಗೇಶ್ವರ ಸ್ವಾಮೀಜಿ ಮತ್ತು ಅನ್ನದಾನೀಶ್ವರ ಶಾಖಾಮಠದ ಶ್ರೀಗಳು ರಥೋತ್ಸವಕ್ಕೆ ಚಾಲನೆ ನೀಡಿದರು.

ಗುದ್ನೇಶ್ವರಮಠ ಮತ್ತು ಕೊನಾಪುರ ಗ್ರಾಮದ ಭಜನಾ ಮೇಳ, ಸಕಲ ಮಂಗಳ ವಾದ್ಯ ಮೇಳ ರಥೋತ್ಸವಕ್ಕೆ ಮೆರುಗು ನೀಡಿದವು.

ADVERTISEMENT

ಶ್ರಾವಣ ಮಾಸ ಪೂರ್ತಿ ಅಜ್ಜಯ್ಯನ ಮಠದಲ್ಲಿ ಅಳಿಯ ಚನ್ನಬಸವೇಶ್ವರ ಸ್ವಾಮಿಯ ಗದ್ದುಗೆಗೆ ಅಭಿಷೇಕ, ಧಾರ್ಮಿಕ ಪೂಜಾ ಕೈಂಕರ್ಯಗಳು ನಡೆದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.