ADVERTISEMENT

ಸಕಾಲಕ್ಕೆ ಸಾಲ ಮರುಪಾವತಿಸಿ

ಬೂದಗುಂಪಾ: ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಮನವಿ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2020, 10:44 IST
Last Updated 26 ಡಿಸೆಂಬರ್ 2020, 10:44 IST
ಕಾರಟಗಿ ತಾಲ್ಲೂಕಿನ ಬೂದಗುಂಪಾ ಸಹಕಾರ ಸಂಘದ ಕಚೇರಿಯಲ್ಲಿ ಪಾಲಾಕ್ಷಪ್ಪ ಕೆಂಡದ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು
ಕಾರಟಗಿ ತಾಲ್ಲೂಕಿನ ಬೂದಗುಂಪಾ ಸಹಕಾರ ಸಂಘದ ಕಚೇರಿಯಲ್ಲಿ ಪಾಲಾಕ್ಷಪ್ಪ ಕೆಂಡದ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು   

ಕಾರಟಗಿ: ‘ಸಂಘದಿಂದ ಪಡೆದ ಸಾಲವನ್ನು ಸಕಾಲಕ್ಕೆ ಮರು ಪಾವತಿ ಮಾಡಬೇಕು. ಇದರಿಂದ ಸಂಘ ಹಾಗೂ ರೈತರು ಆರ್ಥಿಕವಾಗಿ ಸದೃಢರಾಗಬಹುದು’ ಎಂದು ಬೂದಗುಂಪಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪಾಲಾಕ್ಷಪ್ಪ ಷಣ್ಮುಖಪ್ಪ ಕೆಂಡದ ಅಭಿಪ್ರಾಯಪಟ್ಟರು.

ಸಂಘದ ಆವರಣದಲ್ಲಿ ಶುಕ್ರವಾರ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಾಲದ ಹಣವನ್ನು ಸದ್ವಿನಿಯೋಗ ಮಾಡಿಕೊಳ್ಳಬೇಕು. ಬೇಗ ಮರುಪಾವತಿ ಮಾಡಿ ಇತರ ರೈತರಿಗೆ ಸಾಲ ದೊರೆಯುವಂತೆ ಮಾಡಬೇಕು ಎಂದರು.

ADVERTISEMENT

ಸಾಲಗಾರ ಸದಸ್ಯರು ಮೃತರಾದರೆ ಅವರ ಕುಟುಂಬವರಿಗೆ ₹5 ಸಾವಿರ ನಗದು ವಿತರಿಸುವ ಯೋಜನೆ ಜಾರಿಗೊಳಿಸಲಾಗಿದೆ. ಅರ್ಹ ರೈತರಿಗೆ ಸರ್ಕಾರದ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಲುಶ್ರಮಿಸಲಾಗುವುದು’ ಎಂದರು.

ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶರಣೆಗೌಡ ಪೊಲೀಸ್‌ ಪಾಟೀಲ ಅವರು ವಾರ್ಷಿಕ ವರದಿ ಮಂಡಿಸಿ, ಸಂಘದ ಠೇವಣಿ, ಸಾಲದ ವಿವರ, ಮರುಪಾವತಿ, ಮುಂದಿನ ಯೋಜನೆಗಳ ಕುರಿತು ವಿವರಿಸಿದರು.

ಉಪಾಧ್ಯಕ್ಷೆ ಶಾಂತಾ ವೈ.ಉಮೇಶ, ಗ್ರಾಮದ ಪ್ರಮುಖರಾದ ಗುರುಸಿದ್ದಪ್ಪ ಎರಕಲ್‌, ಬಸವರಾಜ್‌ ಚಳ್ಳೂರ, ಶರಣೆಗೌಡ, ಬಿಲ್ಗಾರ ಬಸವರಾಜ್‌, ಶರಣೇಗೌಡ ಪೊಲೀಸ್‌ ಪಾಟೀಲ ಕೊಂತನೂರ ಹಾಗೂ ಸಂಘದ ಸದಸ್ಯರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.